Select Your Language

Notifications

webdunia
webdunia
webdunia
webdunia

ಪೈಸಾ ವಸೂಲ್ ಚಿತ್ರಕ್ಕೆ ಚಾರ್ಮಿ ವಸೂಲ್ ಮಾಡ್ತಿರುವ ಪೈಸಾ ಕೇಳಿದ್ರೆ ಶಾಕ್ ಆಗ್ತೀರಾ..!

Charmy Kaur
ಹೈದರಾಬಾದ್ , ಗುರುವಾರ, 29 ಜೂನ್ 2017 (06:37 IST)
ಹೈದರಾಬಾದ್: ನಟಿ  ಚಾರ್ಮಿ ಬರೋಬ್ಬರಿ  4 ಕೋಟಿ ರೂ ಡಿಮ್ಯಾಂಡ್ ಮಾಡಿದ್ದಾರಂತೆ.ಅದೂ ಸಿಮಾದಲ್ಲಿ ನಾಯಕಿಯಾಗಿ ನಟಿಸಲು ಅಲ್ಲ, ಅಥವಾ ಯಾವುದೇ ಐಟಂ ಸಾಂಗ್ ಗೂ ಅಲ್ಲ. ಬದಲಾಗಿ ಪ್ರೊಡಕ್ಷನ್ ವರ್ಕ್ ಗೆ.  ಹೌದು. ಪ್ರೊಡಕ್ಷನ್ ವರ್ಕ ಗೆ ಚಾರ್ಮಿ 4  ಕೋಟಿ ಕೇಳಿದ್ದಾರೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
 
ಇಷ್ಟಕ್ಕೂ ಚಾರ್ಮಿ ಇಷ್ಟೊಂದು ಮೊತ್ತವನ್ನು ಕೇಳುತ್ತಿರುವುದು ಯಾವ ಚಿತ್ರಕ್ಕೆ ಎಂಬ ಕುತೂಹಲ ಅಲ್ವಾ.. ನಂದಮೂರಿ ಬಾಲಕೃಷ್ಣ ಅಭಿನಯದ 101ನೇ ಚಿತ್ರ ಪೈಸಾ ವಸೂಲ್ ಚಿತ್ರದ ಪ್ರೊಡಕ್ಷನ್ ವರ್ಕ್ ಗಾಗಿ. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದು, ವಿಜೇಂದ್ರ ಪ್ರಸಾದ್ ನಿರ್ಮಾಣಮಾಡುತ್ತಿದ್ದಾರೆ.
 
ಈಗಾಗಲೇ ಫೋರ್ಚುಗಲ್ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಹೈದರಾಬಾದ್ ಗೆ ವಾಪಸ್ ಆಗಿದೆ.  ಹಿಂದೆ ಪುರಿ ಜಗನ್ನಾಥ್ ಅವರ ಕೆಳಗೆ ಪ್ರೊಡಕ್ಷನ್ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡಿದ್ದ ಅನುಭವಹೊಂದಿರುವ ಚಾರ್ಮಿ ಈಗ ಈ ಚಿತ್ರದಲ್ಲಿ ಎಕ್ಸಿಕುಟೀವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೈಸಾವಸೂಲ್ ಚಿತ್ರ 28 ಕೋಟಿ ರೂ ವೆಚ್ಚದಲ್ಲಿ ಭರ್ಜರಿಯಾಗಿ ಮೂಡಿಬರುತ್ತಿದೆ. ಇದರಲ್ಲಿ 4 ಕೋಟಿ ರೂವನ್ನು ಚಾರ್ಮಿನೇ ಡಿಮ್ಯಾಂಡ್ ಮಾಡಿದ್ದಾರೆ. ಚಾರ್ಮಿ ರೇಟು ಕೇಳಿ ಇಡೀ ಸಿನಿಮಾ ಜಗತ್ತೆ ದಂಗಾಗಿ ಹೊಗಿದೆಯಂತೆ.
 

Share this Story:

Follow Webdunia kannada

ಮುಂದಿನ ಸುದ್ದಿ

ತುಂಬು ಗರ್ಬಿಣಿ ಸೆಲಿನಾ ಬಿಕನಿ ಫೋಟೊ ಪೋಸ್ಟ್ ಮಾಡಲು ಕಾರಣವೇನಂತೆ ಗೊತ್ತಾ..