Publish Date: Tue, 22 Aug 2017 (09:55 IST)
Updated Date: Tue, 22 Aug 2017 (09:57 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಆಗಲೇ ಅರ್ಧ ವರ್ಷ ಕಳೆದಿದೆ.
ಹೊಸ ಜೀವನಕ್ಕೆ ಕಾಲಿಟ್ಟಿರುವ ದಂಪತಿ ಇದೀಗ ಹೊಸ ಮನೆಗೆ ಕಾಲಿಡಲಿದ್ದಾರಂತೆ. ಬೆಂಗಳೂರಿನಲ್ಲಿ ಯಶ್ ಹೊಸ ಮನೆಯೊಂದನ್ನು ಖರೀದಿಸಿದ್ದಾರಂತೆ. ಅದರ ಇಂಟೀರಿಯರ್ ಡಿಸೈನ್ ಕೆಲಸಗಳು ಮುಗಿದ ಮೇಲೆ ಆ ಮನೆಗೆ ಶಿಫ್ಟ್ ಆಗುತ್ತಾರಂತೆ. ಹಾಗಂತ ಸ್ವತಃ ರಾಧಿಕಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ನಿರೂಪ್ ಭಂಡಾರಿ ಜತೆ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸಲು ಸಹಿ ಹಾಕಿರುವ ರಾಧಿಕಾ ಇಷ್ಟು ದಿನ ಮನೆಯಲ್ಲೇ ಇದ್ದು, ವೈವಾಹಿಕ ಜೀವನದ ಖುಷಿ ಅನುಭವಿಸಿದ್ದಾರಂತೆ. ಸೆಪ್ಟೆಂಬರ್ 15 ರಿಂದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ರಾಧಿಕಾ ಬ್ಯುಸಿಯಾಗಲಿದ್ದಾರೆ.