Publish Date: Sat, 19 Aug 2017 (10:16 IST)
Updated Date: Sat, 19 Aug 2017 (10:18 IST)
ಬೆಂಗಳೂರು: ಕರುಳಿನ ಕ್ಯಾನ್ಸರ್ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಖ್ಯಾತ ಗಾಯಕ ಹಿನ್ನಲೆ ಗಾಯಕ ಎಲ್ ಎನ್ ಶಾಸ್ತ್ರಿ ನೆರವಿಗೆ ನವರಸನಾಯಕ ಜಗ್ಗೇಸ್ ಧಾವಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ‘ನನಗೆ ಹಾಡಿದ ಮಹನೀಯ ಈತ. ನಾನು ಹಾಡಿದ ಅಂತಿಂಥ ಗಂಡ ನಾನಲ್ಲ’ ಹಾಡು ಕಲಿಯಲು ರಾತ್ರಿಯೆಲ್ಲಾ ನನ್ನ ಪಕ್ಕ ಕೂತು ಕಲಿಸಿದ ವ್ಯಕ್ತಿ ಈತ. ನನ್ನ ಅನೇಕ ಚಿತ್ರಕ್ಕೆ ಹಾಡಿದ್ದಾನೆ. ಇವರ ಸ್ಥಿತಿ ನೋಡಿ ಬೆಜಾರಾಯಿತು.
ಅದಕ್ಕೇ ನನ್ನ ಕೈಲಾದ ಮಟ್ಟಿಗೆ ನೆರವು ನೀಡುತ್ತೇನೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಗಾಯಕ ಇದೀಗ ಕರುಳಿನ ಕ್ಯಾನ್ಸರ್ ಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ.