Select Your Language

Notifications

webdunia
webdunia
webdunia
webdunia

ಪೂಜಾ ಗಾಂಧಿ ಕಾಣೆಯಾಗಿದ್ದು ನಿಜಾನಾ?!

ಪೂಜಾ ಗಾಂಧಿ
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಕಣ್ಮರೆಯಾಗಿದ್ದಾರಂತೆ. ಅವರು ಮೊಬೈಲ್ ಫೋನ್ ಗೂ ರೀಚ್ ಆಗುತ್ತಿಲ್ಲ.. ಎಂದು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಡ್ಗಿಚ್ಚಿನಂತೆ ಸುದ್ದಿ ಹಬ್ಬಿತ್ತು. ಆದರೆ ಇದೆಲ್ಲಾ ನಿಜಾನಾ?

 
ಅದಕ್ಕೆ ಸ್ವತಃ ಪೂಜಾ ಗಾಂಧಿ ಮಾಧ್ಯಮದ ಎದುರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಂತಹದ್ದೊಂದು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ.

‘ನಾನು ಎಲ್ಲು ಹೋಗಿಲ್ಲ. ಪೂನಾಗೆ ಹೋಗಿದ್ದೆ. ಪೂನಾದಿಂದ 10 ಕಿ. ಮೀ. ದೂರದಲ್ಲಿ ಯೋಗ ಕೇಂದ್ರವೊಂದಕ್ಕೆ ಹೋಗಿದ್ದೆ. ಆಗಾಗ ನಾನು ಅಲ್ಲಿಗೆ ಹೋಗುತ್ತೇನೆ. ಆದರೆ ಈ ಬಾರಿ ಮಾತ್ರ ಯಾರೋ ನಾನು ಕಾಣೆಯಾಗಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ’ ಎಂದು ಪೂಜಾ ಸ್ಪಷ್ಟನೆ ನೀಡಿದ್ದಾರೆ.

ಹಾಗಿದ್ದರೆ ಫೋನ್ ಗೂ ಯಾಕೆ ಸಿಕ್ಕಿಲ್ಲ? ಎಂದು ಕೇಳಿದಾಗ ‘ಅಲ್ಲಿ ನೆಟ್ ವರ್ಕ್ ಸಮಸ್ಯೆ ಇತ್ತು. ಫೋನ್ ರೀಚ್ ಆಗುತ್ತಿರಲಿಲ್ಲ. ಅಷ್ಟಕ್ಕೇ ನಾನು ಕಾಣೆಯಾಗಿದ್ದೀನಿ ಎಂದು ಸುದ್ದಿ ಹಬ್ಬಿಸುವುದು ಸರಿಯಾ?’ ಎಂದು ಗರಂ ಆಗಿ ಕೇಳಿದ್ದಾರೆ.

ಇದನ್ನೂ ಓದಿ.. ‘ಭಾರತಕ್ಕೂ ನಾವು ಬೇಡ ಎಂದಾದರೆ ಕೊಂದು ಬಿಡಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್.ಎನ್. ಶಾಸ್ತ್ರೀಗೆ ನೆರವು ನೀಡಲು ಮುಂದಾದ ನಟ ಜಗ್ಗೇಶ್