Publish Date: Fri, 23 Mar 2018 (11:16 IST)
Updated Date: Fri, 23 Mar 2018 (11:18 IST)
ಬೆಂಗಳೂರು: ರಾಜ್ಯಸಭೆಯ ಸ್ಥಾನಗಳಿಗಾಗಿ ವಿಧಾನಸೌಧದಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಏಜೆಂಟ್ ಗಳ ನಡುವೆ ವಾಗ್ವಾದ ನಡೆದಿದೆ.
ಎಂಇಎಸ್ ಶಾಸಕ ಸಂಭಾಜಿ ರಾವ್ ಪರ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣ್ ಮತ ಚಲಾವಣೆ ಮಾಡಲು ಮುಂದಾಗಿದ್ದಕ್ಕೆ ಎರಡೂ ಪಕ್ಷಗಳ ಏಜೆಂಟ್ ಗಳ ನಡುವೆ ವಾಗ್ವಾದ ನಡೆದಿದೆ.
ಸಂಭಾಜಿ ರಾವ್ ಕೈ ನಡುಗುತ್ತದೆ ಎಂಬ ಕಾರಣಕ್ಕೆ ತಾವು ಮತ ಚಲಾಯಿಸುವುದಾಗಿ ಲಕ್ಷ್ಮೀನಾರಾಯಣ್ ಹೇಳಿದಾಗ ಬಿಜೆಪಿ ಏಜೆಂಟ್ ಗಳು ತಗಾದೆ ತೆಗೆದಿದ್ದಾರೆ. ಕೈ ನಡುಗುತ್ತಿದೆ ಎಂದಾದರೆ ವೈದ್ಯರ ಸರ್ಟಿಫಿಕೇಟ್ ತರಲಿ ಎಂದು ವಾದಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ