Publish Date: Thu, 22 Mar 2018 (12:27 IST)
Updated Date: Thu, 22 Mar 2018 (12:41 IST)
ಬೆಂಗಳೂರು: ದಿಡೀರ್ ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೀರಾವರಿ ಸಚಿವ ಎಂಬಿ ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
ನೀರಾವರಿ ಇಲಾಖೆಯಲ್ಲಿನ ಭಾರೀ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆಗೊಳಿಸಿರುವ ಯಡಿಯೂರಪ್ಪ ಇದರ ಬಗ್ಗೆ ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೊಗಳಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಜಲಸಂಪನ್ಮೂಲ ಸಚಿವನಾಗಿ ನಕಲಿ ಟೆಂಡರ್ ನೀಡಿದ ಆರೋಪವನ್ನು ಎಂಬಿ ಪಾಟೀಲ್ ವಿರುದ್ಧ ಹೊರಿಸಿರುವ ಬಿಎಸ್ ವೈ ಅದಕ್ಕೆ ದಾಖಲೆಯನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇಂತಹ ಹಗಲು ದರೋಡೆ ಮಾಡುವ ಸಚಿವ ಎಂಬಿ ಪಾಟೀಲ್ ರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಬಿಎಸ್ ವೈ ಇದೇ ಸಂದರ್ಭದಲ್ಲಿ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ