Publish Date: Sat, 17 Mar 2018 (10:28 IST)
Updated Date: Sat, 17 Mar 2018 (10:30 IST)
ಬೆಂಗಳೂರು: ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಹೇಳಿ ಯಥಾವತ್ತು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ವಿಡಿಯೋ ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವಿಟರ್ ನಲ್ಲಿ ನಗೆಪಾಟಲಿಗೀಡಾಗಿದ್ದಾರೆ.
ನಿನ್ನೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಠುಸ್ ಪಟಾಕಿ ಮಾಡಿದ ಬಿಎಸ್ ವೈ ವಿಡಿಯೋ ನೋಡಿ ಟ್ವಿಟರಿಗರು ನಿಮ್ಮ ಬ್ರೇಕಿಂಗ್ ನ್ಯೂಸ್ ನೋಡಿ ಕಾಂಗ್ರೆಸ್ ನವರು ಬಿಡಿ, ಬಿಜೆಪಿಯವರೇ ಮುಸಿ ಮುಸಿ ನಕ್ಕಿರಬಹುದು ಎಂದು ಲೇವಡಿ ಮಾಡಿದ್ದಾರೆ.
ಇನ್ನು ಕೆಲವರು, ನೀವೇ ದೊಡ್ಡ ಬಕರಾ. ಯಾವುದೋ ಹಳೆಯ ವಿಡಿಯೋ ಹಾಕಿ ನಮ್ಮನ್ನು ಬಕ್ರಾ ಮಾಡ್ತೀರಾ ಎಂದಿದ್ದಾರೆ. ನಿಮ್ಮ ಖಾತೆ ನಿಭಾಯಿಸಲು ಯಾರಾದರೂ ಸಮರ್ಥರನ್ನು ಹುಡುಕಿ. ಯಾರು ಅನಂತ ಕುಮಾರ್ ನಿಭಾಯಿಸುತ್ತಿದ್ದಾರಾ ಎಂದು ಇನ್ನು ಕೆಲವರು ಲೇವಡಿ ಮಾಡಿದ್ದಾರೆ. ಅಂತೂ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಹೇಳಿ ಕೊಡದೇ ಬಿಎಸ್ ವೈ ತಮಾಷೆಯ ವಸ್ತುವಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ