Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಅಬ್ಬರ : ಕೃಷ್ಣಾ ತೀರದಲ್ಲಿ ಆಗಿದ್ದೇನು?

ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಅಬ್ಬರ : ಕೃಷ್ಣಾ ತೀರದಲ್ಲಿ ಆಗಿದ್ದೇನು?
ಚಿಕ್ಕೋಡಿ , ಮಂಗಳವಾರ, 3 ಸೆಪ್ಟಂಬರ್ 2019 (17:32 IST)
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಳವಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.  

ಚಿಕ್ಕೋಡಿ ತಾಲೂಕಿನ  ಕೃಷ್ಣಾ ನದಿಯ ಒಳಹರಿವು ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ - ಯಡೂರ ಸಂಪರ್ಕ ಸೇತುವೆ ಜಲಾವೃತಗೊಂಡಿದೆ.

ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ  30 ಸಾವಿರ ಕ್ಯೂಸೆಕ್ ನೀರನ್ನು ಮತ್ತೆ ಕೃಷ್ಣಾ ನದಿಗೆ ಬಿಡಲಾಗಿದೆ.

105 ಟಿಎಮ್ ಸಿ ಸಾಮರ್ಥ್ಯ ಹೊಂದಿರುವ ಕೋಯ್ನಾ ಜಲಾಶಯದಲ್ಲಿ ಸದ್ಯಕ್ಕೆ 104  ಟಿಎಮ್ ಸಿ ಭರ್ತಿ ನೀರು ಇದೆ.  ಹೆಚ್ಚು ನೀರು ಇರೋದ್ರಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಶ್ರೀರಾಮುಲುಗೆ ವಾರ್ನಿಂಗ್ ನೀಡಿದ ಕಾಂಗ್ರೆಸ್ ನಾಯಕರು