Publish Date: Tue, 03 Sep 2019 (17:26 IST)
Updated Date: Tue, 03 Sep 2019 (17:28 IST)
ಇಡಿ ವಿಚಾರಣೆಯನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದರೆ, ಅವರ ಬೆಂಬಲಿಗರು ಸಚಿವರೊಬ್ಬರಿಗೆ ವಾರ್ನಿಂಗ್ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಮನನೋಯುವಂತೆ ಮಾತನಾಡೋಲ್ಲ. ನನ್ನನ್ನ ಕ್ಷಮಿಸಿ ಅಂತೆಲ್ಲಾ ಸಚಿವ ಬಿ.ಶ್ರೀರಾಮುಲು ಹೇಳಿಕೊಂಡಿದ್ದರು.
ಆದರೆ ರಾಮುಲು ಅವರಿಗೆ ಕೈ ಪಾಳೆಯದ ಮುಖಂಡರು ವಾರ್ನಿಂಗ್ ನೀಡಿದ್ದಾರೆ.
ಮೊದಲು ಎಲ್ಲಾ ಮಾತನಾಡಿ ಈಗ ಉಪ ಚುನಾವಣೆ ಬಂತೆಂದು ಕ್ಷಮೆ ಕೇಳ್ತಿರೋ ರಾಮುಲು ಅವರೇ ಬಾಯಿ ಬಿಗಿ ಹಿಡಿದುಕೊಂಡು ಮಾತನಾಡಿ ಅಂತೆಲ್ಲ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಗುಡುಗಿದ್ದಾರೆ.
ನಿಮ್ಮ ಮಾತಿನಿಂದಾಗಿ ಅಥವಾ ಕೇಳಿರೋ ಕ್ಷಮೆಯಿಂದಾಗಿ ಒಂದು ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಸುಮ್ಮನಿರಬಹುದು. ನಾವು ಸುಮ್ಮನೆ ಕೂಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.
ಗಣಿಗಾರಿಕೆಯ ಉಪ್ಪು ತಿಂದಿರೋ ನಿಮಗೆ ಕುಡಿಯೋಕೆ ನೀರೂ ಮುಂದಿನ ದಿನಗಳಲ್ಲಿ ಸಿಗೋಲ್ಲ ಅಂದಿದ್ದಾರೆ.