Publish Date: Tue, 12 Dec 2023 (16:26 IST)
Updated Date: Tue, 12 Dec 2023 (18:15 IST)
ರಾಜ್ಯಾದ್ಯಂತ ಚಳಿ ಜೋರಾಗುತ್ತಿದೆ, ಕೆಲವೆಡೆ ಮೋಡ ಕವಿದ ವಾತಾವರಣವಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿನ್ನೆ ಧರ್ಮಸ್ಥಳ, ಬೆಳ್ತಂಗಡಿ, ಮಾಣಿ, ಪಣಂಬೂರು, ಮೂಡಿಗೆರೆ, ಮಂಗಳೂರು ವಿಮಾನ ನಿಲ್ದಾಣ, ಸಿದ್ದಾಪುರ, ಹರದನಹಳ್ಳಿ, ಕುಶಾಲನಗರದಲ್ಲಿ ಮಳೆಯಾಗಿದೆ.