Select Your Language

Notifications

webdunia
webdunia
webdunia
webdunia

ಧಾರವಾಡದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ಮಹಿಳೆ ಬಂಧನ

Railway police
ಧಾರವಾಡ , ಸೋಮವಾರ, 30 ಅಕ್ಟೋಬರ್ 2017 (16:30 IST)
ಧಾರವಾಡ: ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಧಾರವಾಡ ರೈಲ್ವೆ ಸುರಕ್ಷಾ ದಳ ಪೊಲೀಸರು ಓರ್ವ ಮಹಿಳೆಯನ್ನ ಬಂಧಿಸಿದ್ದಾರೆ.

ಹುಬ್ಬಳ್ಳಿಯ ರಾಮನಗರ ನಗರದ ನಿವಾಸಿ ಅನಿತಾ  ಬಂಧಿತ ಮಹಿಳೆ. ಅನಿತಾ ಧಾರವಾಡದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಧಾರವಾಡ ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಮಾರಾಟಕ್ಕೆ ಹೊರಟಿದ್ದಳು. ಹೆಣ್ಣು ಮಕ್ಕಳನ್ನು ಧಾರವಾಡದಿಂದ ಮೈಸೂರಿಗೆ ಕರೆದುಕೊಂಡು ಹೊರಟಿದ್ದಳು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ರೈಲ್ವೆ ಸುರಕ್ಷಾ ಪೊಲೀಸರು ಕಾರ್ಯಾಚರಣೆ ಮಾಡಿ, ಧಾರವಾಡದ ರೇಲ್ವೆ ನಿಲ್ದಾಣ ಬಳಿ ಬಾಲಕಿಯರನ್ನು ರಕ್ಷಿಸಿ, ಮಹಿಳೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

100 ವರ್ಷದ ವೃದ್ಧೆಯ ಮೇಲೆ ಯುವಕನ ಅತ್ಯಾಚಾರ