ಮುಂಬೈ: ಭಾರತ ತಂಡವನ್ನು ಅಂಡರ್-19 ವಿಶ್ವಕಪ್ ನಲ್ಲಿ ಪ್ರತಿನಿಧಿಸಿದ್ದ ಕ್ರಿಕೆಟಿಗ ಹರ್ಮೀತ್ ಸಿಂಗ್ ಅಂಧೇರಿ ರೈಲ್ವೇ ಸ್ಟೇಷನ್ ನ ಫ್ಲ್ಯಾಟ್ ಫಾರಂ ಮೇಲೆ ಕಾರು ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ
ಬೆಳಗ್ಗಿನ 7.20 ರ ಸುಮಾರಿಗೆ ರೈಲ್ವೇ ನಿಲ್ದಾಣದಲ್ಲಿ ತುಂಬಾ ಜನ ಓಡಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕ್ರಿಕೆಟಿಗ ನೇರವಾಗಿ ಫ್ಲ್ಯಾಟ್ ಫಾರಂ ಮೇಲೆ ಕಾರು ನುಗ್ಗಿಸಿ ತೊಂದರೆ ಉಂಟುಮಾಡಿದ್ದರು.
ತಕ್ಷಣ ಕಾರನ್ನು ವಶಕ್ಕೆ ಪಡೆದ ರೈಲ್ವೇ ಪೊಲೀಸರು, ಕ್ರಿಕೆಟಿಗನನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಹಿಂದೊಮ್ಮೆ ಹರ್ಮೀತ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ಕೈ ಜೋಡಿಸಿದ ಆರೋಪದ ಎದುರಾಗಿತ್ತಾದರೂ, ನಂತರ ಬಿಸಿಸಿಐನಿಂದಲೇ ಕ್ಲೀನ್ ಚಿಟ್ ಪಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ