Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲು!

ಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲು!
Mumbai , ಗುರುವಾರ, 16 ಫೆಬ್ರವರಿ 2017 (09:16 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.  ರಾಯಿಸ್ ಸಿನಿಮಾದ ಪ್ರಚಾರದ ವೇಳೆ ರೈಲ್ವೇ ಇಲಾಖೆಯ ವಸ್ತುಗಳಿಗೆ ಹಾನಿ ಮಾಡಿದ ಮತ್ತು ದಂಗೆಗೆ ಕಾರಣವಾದ ಆರೋಪದಲ್ಲಿ ಎಫ್ ಐಆರ್ ದಾಖಲಾಗಿದೆ.


ರಾಯಿಸ್ ಚಿತ್ರದ ಪ್ರಚಾರಕ್ಕಾಗಿ ಶಾರುಖ್ ಮುಂಬೈಯಿಂದ ದೆಹಲಿಗೆ ತೆರಳುವ ಕಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ಸಾರ್ವಜನಿಕರು ಶಾರುಖ್ ನೋಡಲು ಮುಗಿ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಅಲ್ಲದೆ ರೈಲ್ವೇ ಇಲಾಖೆಗೆ ಅಪಾರ ಹಾನಿಯಾಗಿತ್ತು.

ಈ ಹಿನ್ನಲೆಯಲ್ಲಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ರೈಲಿನ ಭೋಗಿಯಲ್ಲಿ ನಿಂತಿದ್ದ ಶಾರುಖ್ ಅಭಿಮಾನಿಗಳತ್ತ ಏನನ್ನೋ ಎಸೆದಿದ್ದರು. ಅದನ್ನು ಪಡೆಯಲು ಅಭಿಮಾನಿಗಳು ಮುಗಿಬಿದ್ದಾಗ ನೂಕು ನುಗ್ಗಲು ಉಂಟಾಗಿತ್ತು. ಈ ಪ್ರಕರಣವೀಗ ಶಾರುಖ್ ಗೆ ಸಂಕಷ್ಟ ತಂದೊಡ್ಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂ.1 ಸುಂದರಿ ಹೆಬ್ಬುಲಿ ನೃತ್ಯ!