Select Your Language

Notifications

webdunia
webdunia
webdunia
webdunia

ರಾಹುಲ್,ಖರ್ಗೆ ಲೆಕ್ಕ ಲೋಕ ಗೆಲ್ಲಲು ರಣತಂತ್ರ..!

ರಾಹುಲ್,ಖರ್ಗೆ ಲೆಕ್ಕ ಲೋಕ ಗೆಲ್ಲಲು ರಣತಂತ್ರ..!
bangalore , ಶುಕ್ರವಾರ, 4 ಆಗಸ್ಟ್ 2023 (17:00 IST)
ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಮೇಗಾ ಮೀಟಿಂಗ್ ನಡೆಸಿದ್ದಾರೆ.ಕೆಲವೊಂದಿಷ್ಟು ವಿಚಾರಗಳಿಗೆ  ಸಲಹೆ ಸೂಚನೆಗಳನ್ನು ನೀಡಿದ್ದಾರೆ.ಲೋಕ ಗೆಲ್ಲಲು ರಣತಂತ್ರದ ಲೆಕ್ಕಾಚಾರವನ್ನ ಹಾಕಿದ್ದಾರೆ.ಗ್ಯಾರಂಟಿ ಸರ್ಕಾರವನ್ನ ಮುನ್ನಡೆಸಿಕೊಂಡು ಹೋಗುವ ಮಾರ್ಗದರ್ಶನವನ್ನು ನೀಡಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಿದ್ದು ರಾಷ್ಟ್ರದಲ್ಲಿಯೇ ಕಾಂಗ್ರೆಸ್ ಗೆ ಒಂದು ಶಕ್ತಿ ಬಂದಂತಾಗಿದೆ.ಗ್ಯಾರಂಟಿಗಳನ್ನ ಘೋಷಣೆ ಮಾಡುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲವನ್ನ ಕಾಂಗ್ರೆಸ್ ಕಂಡಿದೆ.ಗ್ಯಾರಂಟಿ ಸರ್ಕಾರದಲ್ಲಿ ಕೆಲವು ಅಡೆತಡೆಗಳು ಉಂಟಾಗುತ್ತಿವೆ.ಈದರಿಂದ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀಳುವ ಆತಂಕ ಕಾಂಗ್ರೆಸ್ ಗೆ ಎದುರಾಗಿದೆ.ಈ ಹಿನ್ನಲೆ ಈವೆಲ್ಲ ಸರಿಪಡಿಸಲು ಮತ್ತು ರಾಜ್ಯ ನಾಯಕರನ್ನ ಲೋಕ ಗೆಲ್ಲಲು ಅಲರ್ಟ್ ಮಾಡಲುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಮಹತ್ವದ ವಿಚಾರಗಳು ಚರ್ಚೆ ಆದವು.

ಸಿಎಂ ಸಿದ್ದರಾಮಯ್ಯ ಅವರು ಸಿಎಲ್ಪಿ ಸಭೆಯಲ್ಲಿ ರಿಪೋರ್ಟ್‌ ಕಾರ್ಡ್ ಬಗ್ಗೆ ಚರ್ಚಿಸಿ ಶಾಸಕರ .ದೆಹಲಿ ಸಭೆಯಲ್ಲಿ ಭಾಗಿ ಆಗಿ ಬಂದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಲೋಕಸಭೆ ಎಲೆಕ್ಷನ್ ಗೆ ತಯಾರಾಗಬೇಕು.ಜನರ ಮೆಚ್ವುಗೆ ಗಳಿಸಬೇಕು ಅನ್ನೋ ಕುರಿತು ಚರ್ಚೆ ಆಗಿದೆ. ಗ್ಯಾರಂಟಿಗಳ ಪ್ರಚಾರದ ಬಗ್ಗೆ ಎಷ್ಟೇ ಒತ್ತಡ ಇದ್ರೂ ಕಾರ್ಯಗತ ಆಗಬೇಕು.ಜಿಲ್ಲಾ ಉಸ್ತುವಾರಿಗಳು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು.ಜಿಲ್ಲಾ, ತಾಲೂಕು, ಮಹಾನಗರ, ಪಂಚಾಯ್ತಿ, ಎಲೆಕ್ಷನ್ ಕಡೆ ಹೆಚ್ಚು ಗಮನ ಕೊಡಬೇಕು.ಒಳ್ಳೆಯ ಸಭೆ ನಡೀತು

.ಅಸಮಧಾನ,ವರ್ಗಾವಣೆ,ಭ್ರಷ್ಟಾಚಾರ ಆರೋಪಗಳ ಊಹಾಪೋಹಗಳು ಇವೆಲ್ಲ ನಿಲ್ಲಬೇಕು.ಶಾಸಕರನ್ನ ವಿಶ್ವಾಸಕ್ಕೆ ಸಚಿವರು ತೆಗೆದುಕೊಳ್ಳಬೇಕು,ಕಾರ್ಯಕರ್ತರು,ಸಾರ್ವಜನಿಕರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು.ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಪಕ್ಷವನ್ನ ಸಂಘಟನೆಯನ್ನು ಮಾಡಬೇಕು,ಜನರ ಸಮಸ್ಯೆಗಳಿಗೆ ಅತೀ ವೇಗದಲ್ಲಿ ಸ್ಪಂದಿಸಬೇಕು.ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟೀಕೆಟ್ ಕೊಟ್ರು ಗೆಲ್ಲಿಸುವ ಹೊಣೆಯನ್ನ ಆ ಭಾಗದ ಸಚಿವರು ಶಾಸಕರು,ವಹಿಸಿಕೊಳ್ಳಬೇಕು‌,ಅಗತ್ಯ ಬಿದ್ರೆ ಸಚಿವರು ಲೋಕಸಭೆ ಚುನಾವಣೆಗೆ ನಿಲ್ಲಬೇಕು ಎಲ್ಲಾ ಟಾಸ್ಕ್ ಗಳನ್ನ ಪೂರೈಸಿದರೆ ಮಾತ್ರಾ ಸಚಿವರಾಗಿ ಮುಂದುವರಿಯುತ್ತಿರಿ,ಸರ್ಕಾರವು ಸುಭದ್ರವಾಗಿ ಈರುತ್ತದೆ ಎಂದು ಸೂಚನೆ ನೀಡಿದ್ರು.ದೆಹಲಿ ಸಭೆಯಲ್ಲಿ ಭಾಗಿ ಆಗಿ ಬಂದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಲೋಕಸಭೆ ಎಲೆಕ್ಷನ್ ಗೆ ತಯಾರಾಗಬೇಕು.ಜನರ ಮೆಚ್ವುಗೆ ಗಳಿಸಬೇಕು ಅನ್ನೋ ಕುರಿತು ಚರ್ಚೆ ಆಗಿದೆ.

ಇನ್ನೂ ವರ್ಗಾವಣೆ, ಶಾಸಕರ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿ ವರ್ಗಾವಣೆ ಆಗ್ತಿದೆ, ಪ್ರಕ್ರಿಯೆ ನಡೀತಾ ಇದೆ.ಶಾಸಕರ ಅಸಮಧಾನ ಅಂತಾ  ಏನೂ ಚರ್ಚೆ ಆಗಿಲ್ಲ ಪಕ್ಷದ ಪುನರ್ ಸಂಘಟನೆ ಅಜೆಂಡಾ ಇದ್ದೇ ಇರುತ್ತೆ.ಮಂತ್ರಿಮಂಡಲದಲ್ಲಿ ದೊಡ್ಡೋರು, ಚಿಕ್ಕೋರು ಇರ್ತಾರೆ.ಸಾಮಾಜಿಕ ನ್ಯಾಯ ಇರಬೇಕು ಕೆಲವು ಕಡೆ ಕೆಎಟಿ ಹೋಗೋದು ಆಗಬಹುದು.ಅನ್ಯಾಯ ಆಗಿದ್ರೆ ಅಧಿಕಾರಿಗಳು ಕೆಎಟಿಗೆ ಹೋಗ್ತಾರೆ.ಇನ್ನೂ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ಆಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸಿಎಂ ಆದ ನಂತರ ಮೊದಲ ಬಾರಿಗೆ ಮೋದಿ ಭೇಟಿ