ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಹುಲ್ ದ್ರಾವಿಡ್ ಮೇಲೆ ಅಪಾರ ನಿರೀಕ್ಷೆಯಿತ್ತು. ಆದರೆ ಅದು ಇತ್ತೀಚೆಗಿನ ದಿನಗಳಲ್ಲಿ ಹುಸಿಯಾಗಿದೆ.
ಫ್ಯಾನ್ಸ್, ಮಾಜಿ ಕ್ರಿಕೆಟಿಗರು ದ್ರಾವಿಡ್ ಕೋಚಿಂಗ್ ಶೈಲಿಯಿಂದ ಅಸಮಾಧಾನಗೊಂಡಿದ್ದಾರೆ. ಅವರು ಕೋಚ್ ಆದ ಬಳಿಕ ಟೀಂ ಇಂಡಿಯಾದಲ್ಲಿ ರೆಸ್ಟ್ ಪರ್ವ ಹೆಚ್ಚಾಗಿದೆ. ತಂಡ ಪ್ರಯೋಗ ಶಾಲೆಯಾಗಿದೆ. ಆದರೆ ಒಂದೇ ಒಂದು ಮೇಜರ್ ಟೂರ್ನಿ ಗೆದ್ದಿಲ್ಲ ಎಂಬ ಅಸಮಾಧಾನವಿದೆ.
ಮುಂಬರುವ ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಕೋಚ್ ಅವಧಿ ಮುಕ್ತಾಯವಾಗುತ್ತಿದೆ. ಒಂದು ವೇಳೆ ತಂಡ ಏಕದಿನ ವಿಶ್ವಕಪ್ ಗೆದ್ದರೆ ದ್ರಾವಿಡ್ ಕೋಚ್ ಆಗಿ ಮುಂದುವರಿಯಬಹುದೇನೋ. ಇಲ್ಲದೇ ಹೋದರೆ ಅದೇ ಅವರ ಕೊನೆಯ ಸರಣಿಯಾಗಬಹುದು. ಅಭಿಮಾನಿಗಳಂತೂ ದ್ರಾವಿಡ್ ರನ್ನು ಕಿತ್ತೊಗೆಯಿರಿ ಎನ್ನುತ್ತಿದ್ದಾರೆ. ಆದರೆ ಬಿಸಿಸಿಐ ಯಾವ ನಿರ್ಧಾರ ಮಾಡುತ್ತೋ ನೋಡಬೇಕು.