Publish Date: Mon, 31 Jul 2023 (08:30 IST)
Updated Date: Mon, 31 Jul 2023 (08:48 IST)
ಬಾರ್ಬಡೋಸ್: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾದ ಅತಿಯಾದ ಪ್ರಯೋಗ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಈ ರೀತಿಯ ಪ್ರಯೋಗಗಳು ಹೆಚ್ಚಾಗಿದ್ದು ತಂಡದ ಪ್ರದರ್ಶನ ತಳಮಟ್ಟ ತಲುಪಿದೆ.
ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಸೋಲಿನ ಬಳಿಕ ತಂಡದ ಪ್ರಯೋಗವನ್ನು ಸಮರ್ಥಿಸಿಕೊಂಡ ಕೋಚ್ ದ್ರಾವಿಡ್ ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಬ್ಬ ಅಭಿಮಾನಿಯಂತೂ ನೀವು ಯಾಕಾದ್ರೂ ಭಾರತ ತಂಡದ ಕೋಚ್ ಆದ್ರೋ! ನಿಮ್ಮ ಮೇಲೆ ಎಷ್ಟು ಗೌರವವಿತ್ತು. ಕೋಚ್ ಆಗಿ ಎಲ್ಲವನ್ನೂ ಕಳೆದುಕೊಂಡಿರಿ ಎಂದಿದ್ದಾರೆ. ಹೆಚ್ಚಿನವರು ನೀವೋ ನಿಮ್ಮ ಪ್ರಯೋಗಗಳೋ, ನೀವೇ ಮೆಚ್ಚಿಕೊಳ್ಳಬೇಕು. ದಯಮಾಡಿ ದ್ರಾವಿಡ್ ನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಿ. ಹೀಗೇ ಆದ್ರೆ ವಿಶ್ವಕಪ್ ಗೆಲ್ಲೋದು ಕನಸು ಎಂದು ಆಕ್ರೋಶ ಹೊರಹಾಕಿದ್ದಾರೆ.