Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸಿಎಂ ಆದ ನಂತರ ಮೊದಲ ಬಾರಿಗೆ ಮೋದಿ ಭೇಟಿ

ಸಿದ್ದರಾಮಯ್ಯ ಸಿಎಂ ಆದ ನಂತರ ಮೊದಲ ಬಾರಿಗೆ ಮೋದಿ ಭೇಟಿ
bangalore , ಶುಕ್ರವಾರ, 4 ಆಗಸ್ಟ್ 2023 (16:50 IST)
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜತೆ ಸಭೆ ನಡೆಸಿದ್ರು.. ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆ ಆದ್ವು.. ನಂತರ ಮೊದಲ ನಿಗದಿ ಆದಂತೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನ ಭೇಟಿಯಾದ್ರು.. ಸಂಸತ್ ಭವನದಲ್ಲಿ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ.. ಈ ಸಂಧರ್ಭದಲ್ಲಿ ಮೈಸೂರು ಪೇಟ ಹಾಗೂ ಅಂಬಾರಿ ಹೊತ್ತ ಆನೆ ಕಲಾಕೃತಿ ನೀಡಿ ಗೌರವಿಸಿದ್ರು.. ನಂತರ ರಾಜ್ಯಕ್ಕೆ ಬರಬೇಕಾದ GST ಹಣ ಮತ್ತು ಹಲವು ಅನುದಾನಗಳು ಹಾಗೂ ಬರ ಪರಿಹಾರದ ನಿಯಮಗಳನ್ನು ಸಡಿಲಗೊಳಿಸುವಂತೆ ಮನವಿ  ಎಂದು ಚರ್ಚೆಯಾಗುತ್ತಿದೆ.

ಪ್ರಧಾನಿ ಮೋದಿ ಭೇಟಿ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಮಾತುಕತೆ ನಡೆಸಿದ್ರು.. 2023ರ ದಸರಾ ಸಂಧರ್ಭದಲ್ಲಿ ಏರೋ ಶೋ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಬಳಿ ಸಿದ್ದು ಮನವಿ ಮಾಡಿದ್ರು.. ಈ ಬಾರೀ ಏರೋ ಶೋ ನಡೆಸಬೇಕು ಎಂಬುದು ರಾಜ್ಯ ಜನರ ಬಯಕೆ ಆಗಿದೆ.. ಈ ವಿಚಾರವನ್ನ ಸಮಿತಿ ಮುಂದೆಯೂ ಚರ್ಚೆ ನಡೆಸಲಾಗಿದೆ.. ಏರೋ ಶೋ ನಡೆಸುವುದರಿಂದ ದಸರಾ ಹಬ್ಬದ ರಂಗು ಹೆಚ್ಚಾಗಲಿದೆ ಎಂದು ಪತ್ರ ನೀಡುವ ಮೂಲಕ ಮನವಿ ಮಾಡಿದ್ದಾರೆ.

ಇನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಭೇಟಿಯಾಗಿ GST ಹಣದ ಬಗ್ಗೆ ಚರ್ಚೆ ನಡೆಸಿದ್ದಾರೆ.. ರಾಜ್ಯಕ್ಕೆ ಬರಬೇಕಾದ GST ಬಾಕಿ ಹಣವನ್ನ ನೀಡುವ ಮನವಿ ಮಾಡಿದ್ರು.. ಇದೆ ವೇಳೆ ಅತಿವೃಷ್ಠಿಯಿಂದಾದ ಹಾನಿ ನೆರವಿಗೆ ಬರುವಂತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ರು.. ರಾಜ್ಯದ ಅಭಿವೃದ್ಧಿ ಯೋಜನಗಳ ಸಂಬಂಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಸೇರಿದಂತೆ ಕೆಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ರು.. GST ಬಾಕಿ ಹಣ ಸೇರಿದಂತೆ ಹಲವು ಅನುದಾನ ಬಿಡುಗಡೆ ಬಗ್ಗೆ ಮನವಿ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ಯಾಮಾರಿಸಿದ್ದ ಕ್ಯಾಬ್ ಚಾಲಕ ಅಂದರ್..!