Publish Date: Fri, 04 Aug 2023 (15:59 IST)
Updated Date: Fri, 04 Aug 2023 (16:01 IST)
ಬೆಂಗಳೂರು: ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿದ್ದು ಏಷ್ಯಾ ಕಪ್ ಗೆ ತಂಡಕ್ಕೆ ಮರಳಲಿದ್ದಾರೆ.
ಬೆಂಗಳೂರಿನ ಎನ್ ಸಿಎನಲ್ಲಿ ರಾಹುಲ್ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಬ್ಯಾಟಿಂಗ್ ಜೊತೆ ಕೀಪಿಂಗ್ ಅಭ್ಯಾಸವನ್ನೂ ಮಾಡುತ್ತಿದ್ದಾರೆ.
ಐಪಿಎಲ್ ವೇಳೆ ತೊಡೆಸಂಧು ಗಾಯ ಮಾಡಿಕೊಂಡಿದ್ದ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದೀಗ ಸುದೀರ್ಘ ಸಮಯದ ನಂತರ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸೋಮವಾರ ಏಷ್ಯಾಕಪ್ ಗೆ ಟೀಂ ಇಂಡಿಯಾ ಆಯ್ಕೆ ನಡೆಯುವ ಸಾಧ್ಯತೆಯಿದೆ.