Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ನಾಲ್ಕೇ ರನ್ ಗಳ ಸೋಲು: ಸೋಲಿಗೆ ಕಾರಣ ಯಾರು?

ಟೀಂ ಇಂಡಿಯಾಗೆ ನಾಲ್ಕೇ ರನ್ ಗಳ ಸೋಲು: ಸೋಲಿಗೆ ಕಾರಣ ಯಾರು?
ಟ್ರಿನಿಡಾಡ್ , ಶುಕ್ರವಾರ, 4 ಆಗಸ್ಟ್ 2023 (08:20 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ 4 ರನ್ ಗಳಿಂದ ಸೋತಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ನಿಕಲಸ್ ಪೂರನ್ 41, ರೊವ್ಮನ್ ಪೊವೆಲ್ 48 ರನ್ ಗಳಿಸಿದರು. ಭಾರತದ ಪರ ಯಜುವೇಂದ್ರ ಚಾಹಲ್, ಅರ್ಷ್ ದೀಪ್ ಸಿಂಗ್ ತಲಾ 2, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್ ಮತ್ತೆ ವೈಫಲ್ಯ ಅನುಭವಿಸಿದರು.

ಈ ಮೊತ್ತವನ್ನು ಟೀಂ ಇಂಡಿಯಾ ಗುರಿ ಮುಟ್ಟಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಆರಂಭಿಕರು ಕೈ ಕೊಟ್ಟಿದ್ದು ದುಬಾರಿಯಾಯ್ತು. ಇಶಾನ್ ಕಿಶನ್ 6, ಶುಬ್ಮನ್ ಗಿಲ್ 3 ‍ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಸೂರ್ಯಕುಮಾರ್ ಯಾದವ್(21), ತಿಲಕ್ ವರ್ಮ (39) ಕೊಂಚ ಭರವಸೆ ಮೂಡಿಸಿದರಾದರೂ ಇವರಿಬ್ಬರ ವಿಕೆಟ್ ಪತನದ ಬಳಿಕ ಭಾರತದ ಕುಸಿತ ಆರಂಭವಾಯಿತು. ಮುಖ್ಯವಾಗಿ ಕೆಳ ಕ್ರಮಾಂಕದಲ್ಲಿ ನಿಂತು ಆಡಬೇಕಿದ್ದ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ರನ್ ಗಳಿಸಲು ವಿಫಲವಾಗಿದ್ದು ತಂಡದ ಸೋಲಿಗೆ ಕಾರಣವಾಯ್ತು. ಅರ್ಷ್ ದೀಪ್ ಸಿಂಗ್ 7 ಎಸೆತಗಳಿಂದ 12 ರನ್ ಗಳಿಸಿ ಭರವಸೆ ಮೂಡಿಸಿದರಾದರೂ ಅವರಿಗೆ ತಕ್ಕ ಸಾಥ್ ಇರಲಿಲ್ಲ. ಕೊನೆಯಲ್ಲಿ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು.  ವಿಂಡೀಸ್ ಪರ ಜೇಸನ್ ಹೋಲ್ಡರ್, ಶೆಫರ್ಡ್, ಮೆಕೊಯ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವೆಸ್ಟ್ ಇಂಡೀಸ್ ಟಿ20: ವಿಂಡೀಸ್ ಆರಂಭಿಕರ ವಿಕೆಟ್ ಪತನ