Select Your Language

Notifications

webdunia
webdunia
webdunia
webdunia

ಭಾರತ-ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಸಮರ

ಟೀಂ ಇಂಡಿಯಾ
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್, ಏಕದಿನ ಸರಣಿ ಬಳಿಕ ಇಂದಿನಿಂದ ಐದು ಪಂದ್ಯಗಳ ಟಿ20 ಸಮರ ಆರಂಭವಾಗಲಿದೆ.

ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಿರಿಯರ ಪಡೆ ಟಿ20 ಸರಣಿ ಆಡಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರಿಗೆ ವಿಶ್ರಾಂತಿ ನೀಡಲಾಗಿದೆ. ಭಾರತದ ಯುವ ಪಡೆಯೂ ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಏಕದಿನ ಸರಣಿಯಲ್ಲೇ ಸಾಬೀತಾಗಿದೆ. ಹೀಗಾಗಿ ಟಿ20 ಸರಣಿಯಲ್ಲೂ ಗೆಲ್ಲುವ ಫೇವರಿಟ್ ತಂಡ ಭಾರತವೇ ಆಗಿದೆ.

ಭಾರತ ತಂಡದ ಪರ ಆರಂಭಿಕರಾಗಿ ಶುಬ್ಮನ್ ಗಿಲ್, ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಇದ್ದಾರೆ. ಹಾರ್ದಿಕ್ ಪಾಂಡ್ಯ ಫಿನಿಶರ್ ಪಾತ್ರ ನಿಭಾಯಿಸಬಹುದು. ಏಕದಿನ ಸರಣಿಯಲ್ಲಿ ಯಜುವೇಂದ್ರ ಚಾಹಲ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಟಿ20 ಸರಣಿಯಲ್ಲಿ ಅವರಿಗೆ ಸ್ಥಾನ ಸಿಗಬಹುದು. ಉಳಿದಂತೆ ವೇಗಿಗಳಾಗಿ ಅರ್ಷ್ ದೀಪ್ ಸಿಂಗ್,ಮುಕೇಶ್ ಕುಮಾರ್ ಕಣಕ್ಕಿಳಿಯಬಹುದು. ಇನ್ನೊಬ್ಬ ಸ್ಪಿನ್ನರ್ ಸ್ಥಾನಕ್ಕೆ ಅಕ್ಸರ್ ಪಟೇಲ್, ಕುಲದೀಪ್ ಯಾದವ್ ನಡುವೆ ಪೈಪೋಟಿಯಿರಲಿದೆ.

ವೆಸ್ಟ್ ಇಂಡೀಸ್‍ ಸುದೀರ್ಘ ಮಾದರಿಯಲ್ಲಿ ಎಡವಿದರೂ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುತ್ತದೆ. ಹೆಟ್ ಮೈರ್, ನಿಕಲಸ್ ಪೂರನ್, ಶೈ ಹೊಪ್ಸ್ ಮುಂತಾದ ಟಿ20 ಸ್ಪೆಷಲಿಸ್ಟ್ ಬ್ಯಾಟಿಗರು ಸವಾಲೊಡ್ಡಬಹುದು. ಹೀಗಾಗಿ ಯುವ ಭಾರತೀಯ ಪಡೆಗೆ ಟಿ20 ಸರಣಿಯಲ್ಲಿ ಸ್ಪರ್ಧೆ ಎದುರಾಗಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟಿಂಗ್ ಜೊತೆ ಕೀಪಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್