ಮುಂಬೈ: ಸಾಮಾನ್ಯವಾಗಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದಾಗಲೆಲ್ಲಾ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ನಾಯಕರಾಗುತ್ತಾರೆ. ಆದರೆ ಈ ಬಾರಿ ಐರ್ಲೆಂಡ್ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿರುವಾಗ ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ನೀಡಲಾಗಿದೆ.
ಹಾರ್ದಿಕ್ ಪಾಂಡ್ಯಗೂ ವಿಶ್ರಾಂತಿ ನೀಡಲಾಗಿದೆ. ಬಿಸಿಸಿಐ ಮತ್ತು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದಕ್ಕೆ ಮುಂಬರುವ ಏಷ್ಯಾ ಕಪ್, ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಫ್ಯಾನ್ಸ್ ಇದನ್ನು ಬೇರೆಯೇ ರೀತಿ ವಿಶ್ಲೇಷಿಸುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಶರ್ಮಾ ನಾಯಕರಾಗಿ ಮೊದಲ ಏಕದಿನ ಪಂದ್ಯ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಈಗ ಏಕಕಾಲಕ್ಕೆ ಎರಡು ತಂಡಗಳನ್ನು ವಿಶ್ವದ ಯಾವುದೇ ಮೂಲೆಗೆ ಕಳುಹಿಸಿದರೂ ಗೆಲ್ಲುವ ತಾಕತ್ತು ಹೊಂದಿದೆ ಎಂದಿದ್ದರು. ಅವರ ಈ ಹೇಳಿಕೆಯೇ ಅವರಿಗೆ ಮುಳುವಾಗಿರಬಹುದು ಎಂದು ಫ್ಯಾನ್ಸ್ ವಿಶ್ಲೇಷಿಸುತ್ತಿದ್ದಾರೆ.