ಪೋರ್ಟ್ ಆಫ್ ಸ್ಪೇನ್: ಸಂಜು ಸ್ಯಾಮ್ಸನ್ ಮಧ‍್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಬಹುದೊಡ್ಡ ತಲೆನೋವನ್ನು ನಿವಾರಿಸಿದ್ದಾರೆ.
ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮುಂತಾದ ಆಟಗಾರರ ಅನುಪಸ್ಥಿತಿಯಲ್ಲಿ ತಂಡದ ಮಧ‍್ಯಮ ಕ್ರಮಾಂಕದಲ್ಲಿ ನಿಂತು ಆಡಬಲ್ಲ ಆಟಗಾರನ ಅಗತ್ಯವಿದೆ. ಸಂಜು ಸ್ಯಾಮ್ಸನ್ ಗೆ ಇದುವರೆಗೆ ತಂಡದಲ್ಲಿ ಆಡುವ ಅವಕಾಶ ಸಿಗುತ್ತಿದ್ದುದೇ ಕಡಿಮೆ.
ಆದರೆ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಸಂಜು ಸರಿಯಾಗಿಯೇ ಬಳಸಿಕೊಂಡರು. ಹೊಡೆಬಡಿಯ ಆಟದ ಜೊತೆಗೆ ಅರ್ಧಶತಕ ಸಿಡಿಸಿ ತಂಡದ ರನ್ ಗತಿಯನ್ನೇ ಬದಲಿಸಿದರು. ಇದರೊಂದಿಗೆ ನಾಲ್ಕನೇ ಕ್ರಮಾಂಕಕ್ಕೆ ತಾವು ಹೇಳಿ ಮಾಡಿಸಿದ ಆಟಗಾರ ಎಂದು ನಿರೂಪಿಸಿದರು. ಐರ್ಲೆಂಡ್ ಸರಣಿಯಲ್ಲಿ ಮತ್ತೆ ಸಂಜುಗೆ ಅವಕಾಶ ನೀಡಲಾಗಿದ್ದು, ತಮ್ಮ ಸ್ಥಾನ ಭದ್ರಪಡಿಸಲು ಅವರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ.