ಟ್ರಿ
ನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟಿರುವ ಟೀಂ ಇಂಡಿಯಾಗೆ ಕುಚಿಕು ಗೆಳೆಯರಾದ ಶುಬ್ಮನ್ ಗಿಲ್-ಇಶಾನ್ ಕಿಶನ್ ಜೋಡಿಯ ಆರಂಭಿಕ ಜೊತೆಯಾಟ ಬಲ ನೀಡಿದೆ.
ಇಂದೂ ಕೂಡಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದಿದ್ದು ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ಭಾರತ ಇಂದು ಎರಡು ಬದಲಾವಣೆ ಮಾಡಿಕೊಂಡಿದೆ. ಅಕ್ಸರ್ ಪಟೇಲ್ ಜಾಗಕ್ಕೆ ಋತುರಾಜ್ ಗಾಯಕ್ ವಾಡ್ ಮತ್ತು ಉಮ್ರಾನ್ ಮಲಿಕ್ ಸ್ಥಾನಕ್ಕೆ ಜಯದೇವ್ ಉನಾದ್ಕಟ್ ಗೆ ಅವಕಾಶ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್-ಇಶಾನ್ ಜೋಡಿ ಮೊದಲು ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುವತ್ತ ಗಮನಹರಿಸಿತು. ಗಿಲ್ ಇತ್ತೀಚೆಗಿನ ವರದಿ ಬಂದಾಗ 53, ಇಶಾನ್ ಕಿಶನ್ ಅಬ್ಬರದ 74 ರನ್ ಸಿಡಿಸಿದ್ದಾರೆ. ಮೈದಾನದ ಹೊರಗೆ ಇಬ್ಬರೂ ಉತ್ತಮ ಸ್ನೇಹಿತರು. ಅದನ್ನು ಆಟದ ಮೂಲಕವೂ ಸಾಬೀತುಪಡಿಸಿದ್ದಾರೆ. ಭಾರತ 18.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 138 ರನ್ ಗಳಿಸಿದೆ.