Select Your Language

Notifications

webdunia
webdunia
webdunia
webdunia

ಜನ್ಮದಿನದಂದು ತಂದೆಯ ನೆನೆದ ರಾಹುಲ್ ಗಾಂಧಿ

ಜನ್ಮದಿನದಂದು ತಂದೆಯ ನೆನೆದ ರಾಹುಲ್ ಗಾಂಧಿ
ನವದೆಹಲಿ , ಶನಿವಾರ, 20 ಆಗಸ್ಟ್ 2022 (01:08 IST)
ನವದೆಹಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಹುಟ್ಟು ಹಬ್ಬದ ಹಿನ್ನೆಲೆ ಅವರ ಮಕ್ಕಳಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ರಾಜೀವ್ ಗಾಂಧಿ ಅವರ ಸಮಾಧಿ ಬಳಿ ತೆರಳಿ ಗೌರವವನ್ನು ಅರ್ಪಿಸಿದರು.
 
ಈ ವೇಳೆ ತಮ್ಮ ತಂದೆಯನ್ನು ನೆನೆದ ರಾಹುಲ್ ಗಾಂಧಿ, ಟ್ವಿಟ್ಟರ್ನಲ್ಲಿ ರಾಜೀವ್ ಗಾಂಧಿಯವರ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ರಾಹುಲ್, ಅಪ್ಪಾ, ನೀವು ಯಾವಾಗಲೂ ನನ್ನ ಜೊತೆ, ನನ್ನ ಹೃದಯದಲ್ಲಿದ್ದೀರಿ. ನೀವು ಈ ದೇಶಕ್ಕೆ ಕಂಡ ಕನಸನ್ನು ಪೂರೈಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವ ಅರ್ಪಿಸಿದರು. ನಮ್ಮ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಜನ್ಮದಿನದಂದು ಅವರಿಗೆ ನಮನಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀಯಕರನಿಗಾಗಿ ಪತಿಯ ಹತ್ಯೆಗೆ ಸ್ಕೆಚ್