Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ರಾಹುಲ್ ಗಾಂಧಿ

ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ರಾಹುಲ್ ಗಾಂಧಿ
ಬೆಂಗಳೂರು , ಬುಧವಾರ, 16 ಆಗಸ್ಟ್ 2017 (11:55 IST)
ಬೆಂಗಳೂರು: ಅಗ್ಗದ ದರದ ಊಟ, ಉಪಾಹಾರ ಒದಗಿಸಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಗೆ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ.

 
ಜಯನಗರದ ಕನಕನಪಾಳ್ಯದಲ್ಲಿರುವವ ಇಂದಿರಾ ಕ್ಯಾಂಟೀನ್ ಶಾಖೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಒಟ್ಟು 101 ಕ್ಯಾಂಟೀನ್ ಗೆ ಚಾಲನೆ ದೊರಕಿದೆ. ಇಲ್ಲಿ 10 ರೂ.ಗೆ ಊಟ ಮತ್ತು 5 ರೂ.ಗೆ ಉಪಾಹಾರ ದೊರೆಯಲಿದೆ.

ಅಜ್ಜಿ ಹೆಸರಿನ ಕ್ಯಾಂಟೀನ್ ಉದ್ಘಾಟಿಸಿದ ಮೇಲೆ ಕ್ಯಾಂಟೀನ್ ಒಳಗೆ ಪರಿಶೀಲನೆ ನಡೆಸಿದ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ವೇದಿಕೆಯತ್ತ ತೆರಳಿದ ರಾಹುಲ್ ಗಾಂಧಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಸಚಿವ ಕೆಜೆ ಜಾರ್ಜ್, ವಿಎಸ್ ಉಗ್ರಪ್ಪ, ಡಿಕೆ ಶಿವಕುಮಾರ್ ಮುಂತಾದ ಘಟಾನುಘಟಿ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ.. ನಾಲ್ಕು ವರ್ಷಗಳ ನಂತರ ಕ್ರಿಕೆಟ್ ಕಣದಲ್ಲಿ ಶ್ರೀಶಾಂತ್ ಹಾಜರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ಇಫೆಕ್ಟ್: ಬಿಎಂಟಿಸಿ ಸಿಬ್ಬಂದಿಗೆ ಎರಡು ದಿನ ರಜೆ