Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಹೊಣೆ ಪ್ರಿಯಾಂಕ ಹೆಗಲಿದೆ?

ಕಾಂಗ್ರೆಸ್ ಹೊಣೆ ಪ್ರಿಯಾಂಕ ಹೆಗಲಿದೆ?
NewDelhi , ಸೋಮವಾರ, 14 ಆಗಸ್ಟ್ 2017 (13:48 IST)
ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಹೊಸ ನಾಯಕತ್ವದ ಚಿಂತನೆಯಲ್ಲಿದೆ. ಮೂಲಗಳ ಪ್ರಕಾರ ಪ್ರಿಯಾಂಕಾ ವಾದ್ರಾ ಕಣಕ್ಕಿಳಿಯುವ ಸಾಧ್ಯತೆಯಿದೆ.

 
ಪ್ರಿಯಾಂಕಾ ವಾದ್ರಾರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡುವ ಕುರಿತಂತೆ ಸೋನಿಯಾ ಗಾಂಧಿ ಸುಳಿವು ನೀಡಿದ್ದಾರೆ. ಇದರಿಂದ ಪ್ರಿಯಾಂಕಾ ವಾದ್ರಾ ಪಕ್ಷದಲ್ಲಿ ಅಧಿಕೃತವಾಗಿ ಹುದ್ದೆಗೇರುವ ಸಾಧ್ಯತೆ ದಟ್ಟವಾಗಿದೆ.

ಆಗಸ್ಟ್ 8 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಸೋನಿಯಾ ಗಾಂಧಿ ಪ್ರಿಯಾಂಕಾ ನೇಮಕದ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಸುಷ್ಮಾ ಸ್ವರಾಜ್ ರನ್ನು ಅಮ್ಮ ಎಂದ ಪಾಕ್ ಮಹಿಳೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಷ್ಮಾ ಸ್ವರಾಜ್ ರನ್ನು ಅಮ್ಮ ಎಂದ ಪಾಕ್ ಮಹಿಳೆ