Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ನಾಳೆ 101 ಇಂದಿರಾ ಕ್ಯಾಂಟೀನ್`ಗಳಿಗೆ ಚಾಲನೆ

ಬೆಂಗಳೂರಲ್ಲಿ ನಾಳೆ 101 ಇಂದಿರಾ ಕ್ಯಾಂಟೀನ್`ಗಳಿಗೆ ಚಾಲನೆ
ಬೆಂಗಳೂರು , ಮಂಗಳವಾರ, 15 ಆಗಸ್ಟ್ 2017 (20:11 IST)
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್`ಗಳಿಗೆ ನಾಳೆ ಚಾಲನೆ ಸಿಗಲಿದೆ.

101 ಇಂದಿರಾ ಕ್ಯಾಂಟೀನ್`ಗಳಿಗೆ ನಾಳೆ ಚಾಲನೆ ಸಿಗಲಿದ್ದು, ಇನ್ನುಳಿದ ಕ್ಯಾಂಟೀನ್`ಗಳು ಅಕ್ಟೋಬರ್2ರ ಹೊತ್ತಿಗೆ ಲೋಕಾರ್ಪಣೆಗೊಳ್ಳಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಅಡುಗೆ ಮನೆಗಳನ್ನ ನಿರ್ಮಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಕೇವಲ 2 ತಿಂಗಳುಗಳಲ್ಲಿ 101 ಕ್ಯಾಂಟೀನ್`ಗಳನ್ನ ನಿರ್ಮಾಣ ಮಾಡಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು ಎಂದು ಸಚಿವರು ಹೇಳಿದ್ದಾರೆ. ಪ್ರತಿ ನಿತ್ಯ 3 ಲಕ್ಷ ಜನರಿಗೆ ಈ ಕ್ಯಾಂಟೀನ್`ಗಳಲ್ಲಿ ಕಡಿಮೆ ದರದಲ್ಲಿ ಊಟ ಮತ್ತು ತಿಂಡಿ ನೀಡಲಾಗುತ್ತದೆ. 10 ರೂಪಾಯಿಗೆ ಊಟ ಮತ್ತು 5 ರೂಪಾಯಿಗೆ ಉಪಾಹಾರ ನೀಡಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ಕೇಸ್: ಇಬ್ಬರು ಆರೋಪಿಗಳ ಬಂಧನ