Select Your Language

Notifications

webdunia
webdunia
webdunia
webdunia

ಯಾರಿಗೂ ಹೆದರದಂತೆ ರಾಹುಲ್​​ ಗಾಂಧಿ ಕರೆ

webdunia
ಮಹಾರಾಷ್ಟ್ರ , ಶುಕ್ರವಾರ, 11 ನವೆಂಬರ್ 2022 (18:00 IST)
ಯಾರಿಗೂ ಹೆದರಬೇಡಿ ಮತ್ತು ರಾಷ್ಟ್ರವನ್ನು ವಿಭಜಿಸುವ ದ್ವೇಷವನ್ನು ಹರಡದಂತೆ ನೋಡಿಕೊಳ್ಳಿ. ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ, ದ್ವೇಷವನ್ನಲ್ಲ ಎಂದು ಭಾರತದ ಯುವ ಪೀಳಿಗೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ನಾಂದೇಡ್‍ನಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಯುವ ಪೀಳಿಗೆಗೆ ಸಂದೇಶವೊಂದನ್ನು ನೀಡುವಂತೆ ಕೇಳಿದಾಗ ರಾಹುಲ್ ಗಾಂಧಿ ಈ ಸಂದೇಶವನ್ನು ಸಾರಿದ್ದಾರೆ. ಈ ವೀಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ರಾಹುಲ್ ಗಾಂಧಿ ಅವರು, ನಾನು ಪ್ರಧಾನಿ ನರೇಂದ್ರ ಮೋದಿ ಅಥವಾ RSS ಅನ್ನು ಗುರಿಯಾಗಿಸಿಕೊಂಡು ಹೇಳುತ್ತಿಲ್ಲ. ಜೀವನದಲ್ಲಿ ಯಾವುದಕ್ಕೂ ಭಯಪಡಬೇಡಿ, ನಿರ್ಭೀತರಾಗಿದ್ದರೆ ಯಾರನ್ನೂ ದ್ವೇಷಿಸುವುದಿಲ್ಲ. ನಿಮ್ಮ ಹೃದಯದಲ್ಲಿರುವ ಭಯವನ್ನು ತೊಡೆದುಹಾಕಿ ಮತ್ತು ದೇಶಕ್ಕಾಗಿ ಕೆಲಸ ಮಾಡಿ. ದೇಶದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಹರಡಿ, ದ್ವೇಷವಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಭಾರಿ ಮಳೆ