Select Your Language

Notifications

webdunia
webdunia
webdunia
webdunia

CISF ಸಿಬ್ಬಂದಿಯೊಂದಿಗೆ ಶ್ವಾನದ ಯೋಗ

CISF ಸಿಬ್ಬಂದಿಯೊಂದಿಗೆ ಶ್ವಾನದ ಯೋಗ
bangalore , ಶುಕ್ರವಾರ, 11 ನವೆಂಬರ್ 2022 (17:33 IST)
ಶ್ವಾನಗಳಿಗೆ ತರಬೇತಿ ನೀಡಿ ಸೈನ್ಯದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಅವು ಸೈನಿಕರಂತೆ ಶತ್ರುವಿನ ಜಾಡು ಹಿಡಿಯುವುದನ್ನು ಕರಗತ ಮಾಡಿಕೊಂಡಿರ್ತವೆ. ಇಲ್ಲೊಂದು ವಿಡಿಯೋ ವೈರಲ್​ ಆಗಿದ್ದು, ದೆಹಲಿಯ ಮೆಟ್ರೋ ಸ್ಟೇಷನ್​ನಲ್ಲಿ CISF ಸಿಬ್ಬಂದಿಯೊಂದಿಗೆ ಶ್ವಾನವೊಂದು ಯೋಗ ಮಾಡಿದ್ದು, ಜನ ಆಶ್ವರ್ಯಚಕಿತರಾಗಿದ್ದಾರೆ. ಅನೇಕರು ಈ ನಾಯಿಯ ಶಿಸ್ತು ಮತ್ತು ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ. ಬೇಕಾದ ಆಹಾರವನ್ನು ಕೊಡುವುದು, ವಾಕಿಂಗ್​ ಕರೆದುಕೊಂಡು ಹೋಗುವುದು, ಮುದ್ದು ಮಾಡುವುದು, ವಿಡಿಯೋ ಮಾಡುವುದೆಲ್ಲ ಸಾಮಾನ್ಯ. ಆದರೆ, ನಾಯಿಯೂ ಯೋಗ ಕಲಿತಿರುವುದನ್ನು ಕಂಡು ಮೆಟ್ರೋ ಪ್ರಯಾಣಿಕರು ಶಾಕ್​​ ಆಗಿದ್ದಾರೆ. ಈ ವಿಡಿಯೋವನ್ನು ರೆಕಾರ್ಡ್​​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಶೇರ್​​ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿರಿಯಾನಿ ಸಪ್ಲೈ ತಡವಾಗಿದ್ದಕ್ಕೆ ಹಲ್ಲೆ