Publish Date: Thu, 03 Nov 2022 (18:48 IST)
Updated Date: Thu, 03 Nov 2022 (18:50 IST)
ನಮ್ಮ ಆದಿವಾಸಿಗಳು ನಮ್ಮ ಕಾಲಾತೀತ ಸಂಸ್ಕೃತಿಗಳು ನಮ್ಮ ದೇಶದ ವೈವಿಧ್ಯತೆಯ ಭಂಡಾರವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ನಡೆಯುತ್ತಿದೆ. ಯಾತ್ರೆಯಲ್ಲಿ ರಾಹುಲ್ ಜೊತೆಗೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಾರೆ. ಯಾತ್ರೆಯಲ್ಲಿ ಧಿಮ್ಸಾ ಕಲಾವಿದರ ಜೊತೆ ರಾಹುಲ್ ನ್ಯತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ತೆಲಂಗಾಣದ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ನೃತ್ಯ ಮಾಡುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದ ಬುಡಕಟ್ಟು ಕಲಾವಿದರೊಂದಿಗೆ ರಾಹುಲ್ ಗಾಂಧಿ ನೃತ್ಯ ಮಾಡಿದ್ದಾರೆ.