Select Your Language

Notifications

webdunia
webdunia
webdunia
webdunia

ದುರಂಹಕಾರ, ಮಾಹಿತಿ ಕೊರತೆಗೆ ಲಸಿಕೆ ಇಲ್ಲ: ರಾಹುಲ್ ಗೆ ಪ್ರಹ್ಲಾದ್ ಜೋಷಿ ಟಾಂಗ್

bangalore
bangalore , ಭಾನುವಾರ, 4 ಜುಲೈ 2021 (14:01 IST)
ದುರಂಹಕಾರ ಹಾಗೂ ಮಾಹಿತಿ ಕೊರತೆಗೆ ಲಸಿಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆ ಸಂಬಂಧ ಮಾಹಿತಿ ಕೊರತೆ ರಾಹುಲ್ ಗಾಂಧಿಗೆ ಇದೆ ಎಂದರು.
ಅಮೆರಿಕಾದ ಜನಸಂಖ್ಯೆಯಷ್ಟೇ ಲಸಿಕೆ ನೀಡಿದ್ದೇವೆ. ಎರಡು ಇಂಗ್ಲೆಂಡ್ ಜನಸಂಖ್ಯೆಯಷ್ಟು ಲಸಿಕೆ ನೀಡಲಾಗಿದೆ. 125 ಕೋಟಿ ಜನರಿಗೂ ಒಟ್ಟಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಲಸಿಕೆ ನೀಡಲಾಗುವುದು. ಒಂದು ತಿಂಗಳ ಸಮಯ ನೀಡಿ ರಾಹುಲ್ ಮಾತನಾಡಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ನೋ ಲಸಿಕೆ ಬೋರ್ಡ್ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಜೊತೆ ಮಾತನಾಡುತ್ತೇನೆ ಎಂದು ಅವರು ಸಮಜಾಯಿಷಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನವಜಾತ ಶಿಶುವಿನ ಹತ್ಯೆ ಮಾಡಿ ಕಿಟಿಕಿಗೆ ನೇತು ಹಾಕಿದರು!