Select Your Language

Notifications

webdunia
webdunia
webdunia
webdunia

ಹೆಂಡತಿಯೊಂದಿಗೆ ಜಗಳ; ಹಸುಗೂಸನ್ನು ಎದೆಗವಚಿಕೊಂಡು ತಂದೆ ಆತ್ಮಹತ್ಯೆ

ಹೆಂಡತಿಯೊಂದಿಗೆ ಜಗಳ; ಹಸುಗೂಸನ್ನು ಎದೆಗವಚಿಕೊಂಡು ತಂದೆ ಆತ್ಮಹತ್ಯೆ
ಕಲಬುರ್ಗಿ , ಸೋಮವಾರ, 5 ಮಾರ್ಚ್ 2018 (06:55 IST)
ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗುವನ್ನು ಎದೆಗವಚಿಕೊಂಡು ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯೊಂದು ಅಫಜಲಪುರ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.


ಶರಣು ಕವಲಗಿ(35) ತನ್ನ ಎರಡುವರೆ ತಿಂಗಳ ಮಗುವನ್ನು ಎದೆಗೆ ಅವುಚಿಕೊಂಡು ನಂತರ ಸೀಮೆ ಎಣ್ಣೆ ಸುರಿದುಕೊಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ


ಹೆರಿಗೆಯಾದ ನಂತರ ತವರು ಮನೆಯಲ್ಲಿದ್ದ ಪತ್ನಿ ಜೊತೆ ಶರಣು ಆಗಾಗ ಜಗಳವಾಡುತ್ತಿದ್ದನು. ಪತ್ನಿ ಮನೆಗೆ ಬಂದು ಜಗಳವಾಡಿದ್ದರಿಂದ ಪತ್ನಿ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದ್ದಾರೆ. ಅಷ್ಟರಲ್ಲೇ ಜೋಳಿಗೆಯಲ್ಲಿದ್ದ ಮಗುವನ್ನು ಎತ್ತಿಕೊಂಡು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾನೆ. ಕೋಣೆಯ ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಬೆಂಕಿಯಿಂದ ತಂದೆ ಮಗಳು ಸುಟ್ಟು ಕರಕಲಾಗಿದ್ದರು.


ಶರಣು ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಜಗಳವಾಡಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿಗೆ ಕಿರುಕುಳವನ್ನು ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಲ್ಲಿ ಸೆನೆಟ್ ಗೆ ಹಿಂದೂ ಮಹಿಳೆ ಆಯ್ಕೆ!