Publish Date: Fri, 02 Mar 2018 (07:26 IST)
Updated Date: Fri, 02 Mar 2018 (07:29 IST)
ಬೆಂಗಳೂರು: ತಾಯಿಯಾದ ನಂತರ ಮೊದಲ ಬಾರಿ ಟೆನಿಸ್ ಅಂಗಣಕ್ಕೆ ಇಳಿಯಲು ಸಜ್ಜಾಗುತ್ತಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರಿಗೆ ಪತಿ ಅಲೆಕ್ಸಿ ಒಹಾನಿಯನ್ ಒಂದು ಅಚ್ಚರಿಯ ಉಡುಗೊರೆಯೊಂದನ್ನು ನೀಡಿ ಪ್ರೀತಿಯ ಮಡದಿಯನ್ನು ಆಟಕ್ಕೆ ಸಜ್ಜುಗೊಳಿಸಿದ್ದಾರೆ.
ಮಾರ್ಚ್ ಐದರಂದು ನಡೆಯಲಿರುವ ಬಿಎನ್‌ಪಿ ಪರಿಬಾಸ್ ಓಪನ್ ಟೂರ್ನಿಯಲ್ಲಿ ಸೆರೆನಾ ಭಾಗವಹಿಸಲಿದ್ದಾರೆ. ಈ ಟೂರ್ನಿ ನಡೆಯಲಿರುವ ಕಾಲಿಫ್‌ನ ಇಂಡಿಯನ್ ವೇಲ್ಸ್ ಟೆನಿಸ್ ಗಾರ್ಡನ್‌ನಲ್ಲಿ ಮಗುವಿನೊಂದಿಗೆ ಸೆರೆನಾ ಇರುವ ಐದು ಫಲಕಗಳನ್ನು ಒಹಾನಿಯನ್ ಪ್ರದರ್ಶಿಸಿದ್ದಾರೆ.
ಇದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು ‘ಪುತ್ರಿ ಒಲಿಂಪಿಯಾ ಮತ್ತು ನಾನು ಸೆರೆನಾ ಅವರನ್ನು ಮತ್ತೆ ಅಂಗಣಕ್ಕೆ ಸ್ವಾಗತಿಸುತ್ತೇವೆ’ ಎಂದು ಬರೆದಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ