ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಸಂಸದೆಯೊಬ್ಬರು ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೇರಿದ ಹಿಂದೂ ಸಮುದಾಯದ ಮೊದಲ ದಲಿತ ಮಹಿಳೆಯಾಗಿದ್ದಾರೆ. ಸಿಂಧ್ ಪ್ರಾಂತ್ಯದ ಕೃಷ್ಣಕುಮಾರಿ ಕೊಲ್ಹಿ (39) ಅವರು ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸದಸ್ಯೆಯಾಗಿದ್ದು, ಪಕ್ಷವು ಅವರಿಗೆ ಸೆನೆಟ್ ಟಿಕೆಟ್ ನೀಡಿತ್ತು. ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ಕೋಟಾದಡಿ ಆಯ್ಕೆಯಾಗಿದ್ದಾರೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಈ ಆಯ್ಕೆ ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಕೃಷ್ಣಕುಮಾರಿ ಕೊಹ್ಲಿಗಿಂತಲೂ ಹಿಂದೆ ರತ್ನ ಭಗವನ್ ದಾಸ್ ಎಂಬವರು ಮೇಲ್ಮಗೆ ಆಯ್ಕೆ ಆಗಿದ್ದರು. ಪಿಪಿಪಿಯಿಂದ ಆಯ್ಕೆ ಆಗಿದ್ದ ಅವರು 2012ರ ವರೆಗೆ ಮೇಲ್ಮನೆಯ ಸದಸ್ಯರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ