Select Your Language

Notifications

webdunia
webdunia
webdunia
webdunia

ಕ್ವಾರಂಟೈನ್ ಸೀಲ್ ಇದ್ರೂ ಓಡಾಡಿ ಭಯ ಹುಟ್ಟಿಸಿದ ಯುವಕ

ಕ್ವಾರಂಟೈನ್ ಸೀಲ್ ಇದ್ರೂ ಓಡಾಡಿ ಭಯ ಹುಟ್ಟಿಸಿದ ಯುವಕ
ಹುಬ್ಬಳ್ಳಿ , ಬುಧವಾರ, 8 ಏಪ್ರಿಲ್ 2020 (17:07 IST)
ಕೈ ಮೇಲೆ ಕೊರೊನಾ ಕ್ವಾರಂಟೈನ್‌ ಸೀಲ್ ಇದ್ರೂ ರಾಜಾರೋಷವಾಗಿ ಓಡಾಡುವ ಮೂಲಕ ವ್ಯಕ್ತಿಯೊಬ್ಬ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಸಂಶಿ ಮೂಲದ ಹಜರತ್ ಅಲಿ ಜೋಡ್ಮನಿ ಎಂಬಾತನೇ ಬೇಕಾ ಬಿಟ್ಟಿ ಓಡಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾನೆ.

ಕಳೆದ 10 ದಿನಗಳ ಹಿಂದೆ ಗೋವಾಕ್ಕೆ ಪ್ರವಾಸ ಬೆಳೆಸಿದ್ದ. ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ್ದ.‌ ಬೆಳಗಾವಿ ಗಡಿಯಲ್ಲಿ ಈತನಿಗೆ ಆರೋಗ್ಯ‌ ಇಲಾಖೆ  ಅಧಿಕಾರಿಗಳು ಕ್ವಾರೈಂಟೈನ್ ಸೀಲ್ ಹಾಕಿದ್ದಾರೆ. ಕೈ ಮೇಲೆ ಸೀಲ್ ಇದ್ದರೂ ಮನೆಯಲ್ಲಿ ಇರಲಿಲ್ಲ ಜೋಡ್ಮನಿ.

ಔಷಧಿ ಖರೀದಿಗೆಂದು ಚೆನ್ನಮ್ಮ ವೃತ್ತದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೆಡಿಕಲ್ ಸ್ಟೋರ್ ಕೆಲಸಗಾರನ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ  ಪೊಲೀಸರು, ಕೈ ಮೇಲೆ ಸೀಲ್ ಇರೋದು ಧೃಢಪಡಿಸಿಕೊಂಡು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತನನ್ನು ತಪಾಸಣೆಗೆ ಒಳಪಡಿಸಿದ್ದು, ಹೆಚ್ಚಿನ ತಪಾಸಣೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಕ್ಕೆ ಕಲಬುರಗಿಯಲ್ಲಿ ಎರಡನೇ ಬಲಿ