Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ತೊಲಗಿಸಲು ಮನೆ ಮನೆ ತಪಾಸಣೆ ಶುರು

ಕೊರೊನಾ ವೈರಸ್ ತೊಲಗಿಸಲು ಮನೆ ಮನೆ ತಪಾಸಣೆ ಶುರು
ಕಾರವಾರ , ಭಾನುವಾರ, 29 ಮಾರ್ಚ್ 2020 (17:20 IST)
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ  ಮುಂಜಾಗೃತಾ ಕ್ರಮವಾಗಿ  ಮನೆ ಮನೆ ಭೇಟಿ ಶುರುಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲಾಡಳಿತವು  ಮನೆ ಮನೆ ಸರ್ವೆ ಕಾರ್ಯ ಶುರುಮಾಡಿದೆ. ಬೆಳಿಗ್ಗೆಯಿಂದಲೇ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಮನೆ ಮನೆ ಸರ್ವೆ ಕಾರ್ಯ ಆರಂಭಗೊಂಡಿದೆ.

ಪ್ರತಿ ಮನೆಯಲ್ಲಿ ಜ್ವರದಿಂದ  ಬಳಲುತ್ತಿರುವವರು ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿರುವವರು, ಇತ್ತೀಚಿಗೆ  ವಿದೇಶ ಪ್ರವಾಸ ಮಾಡಿ ಬಂದವರು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಈ ಕ್ರಮದಿಂದ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಯ ಪ್ರಮಾಣ  ನಿಖರವಾಗಿ ಅರಿಯಲು ಸಾಧ್ಯವಾಗಲಿದೆ.

ಈ ಸರ್ವೇ ಕಾರ್ಯದಲ್ಲಿ ಜ್ವರದಿಂದ ಬಳಲುತ್ತಿರುವವರಿಗೆ ಕೂಡಲೇ ಹತ್ತಿರದ ಆಸ್ಪತ್ರೆಗಳಲ್ಲಿ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.  ವಿದೇಶದಿಂದ ಬಂದವರನ್ನು  ಪ್ರತಿ ದಿನ ಸ್ಕ್ರೀನಿಂಗ್  ಗೆ ಒಳಪಡಿಸಲಾಗುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪರಿಹಾರ ನಿಧಿಗೆ 2 ತಿಂಗಳ ವೇತನ ಕೊಟ್ಟ ಖರ್ಗೆ ಹೇಳಿದ್ದೇನು?