Select Your Language

Notifications

webdunia
webdunia
webdunia
webdunia

ಪಬ್ ಜಿ ಗೇಮ್ ಆಡಲು ತಂದೆಯನ್ನೇ ಘೋರವಾಗಿ ಕೊಂದ ಪಾಪಿ ಮಗ

ಪಬ್ ಜಿ ಗೇಮ್ ಆಡಲು ತಂದೆಯನ್ನೇ ಘೋರವಾಗಿ ಕೊಂದ ಪಾಪಿ ಮಗ
ಬೆಳಗಾವಿ , ಸೋಮವಾರ, 9 ಸೆಪ್ಟಂಬರ್ 2019 (10:28 IST)
ಬೆಳಗಾವಿ : ಪಬ್ ಜಿ ಗೇಮ್ ಆಡಲು ನೆಟ್ ರಿಚಾರ್ಜ್ ಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.




ಶಂಕ್ರಪ್ಪಾ ಕಮ್ಮಾರ(59) ಕೊಲೆಯಾದ ತಂದೆ,  ರಘುವೀರ್ ಕಮ್ಮಾರ(21) ಕೊಲೆ ಮಾಡಿದ ಪಾಪಿ ಮಗ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪಾ ಅವರು ಯಾವಾಗಲೂ ಪಬ್ ಜಿ ಆಡುತ್ತಿದ್ದ ಮಗನಿಗೆ ಆಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ತಂದೆಯ ಮಾತಿಗೆ ಬೆಲೆಕೊಡದೆ ಅದನ್ನು ಮುಂದುವರಿಸಿದ ಮಗ ಮೊಬೈಲ್ ಗೆ  ನೆಟ್ ಹಾಕಿಕೊಳ್ಳಲು ತಂದೆಯ ಬಳಿ ಹಣ ಕೇಳಿದ್ದಾನೆ. ಇದಕ್ಕೆ ತಂದೆ ನಿರಾಕರಿಸಿದ್ದಕ್ಕೆ ಆತ ಮಲಗಿರುವಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ವಿಕೃತವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಮಗನನ್ನು  ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡಿದ ಡಿಸಿ ಸಸಿಕಾಂತ್ ಪಾಕಿಸ್ತಾನಕ್ಕೆ ವಲಸೆ ಹೋಗಲಿ- ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಟ್ವೀಟ್