Publish Date: Wed, 28 Aug 2019 (11:36 IST)
Updated Date: Wed, 28 Aug 2019 (11:38 IST)
ಬೆಳಗಾವಿ : ನಮ್ಮ ಹೋರಾಟ ಜೆಡಿಎಸ್ ವಿರುದ್ಧವಲ್ಲ, ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ಧ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿಯದ್ದು ಅನೈತಿಕ ಸರ್ಕಾರ. ಆದ್ದರಿಂದ ನಮ್ಮ ಹೋರಾಟ ಜೆಡಿಎಸ್ ವಿರುದ್ಧವಲ್ಲ, ಕೋಮುವಾದಿ ಬಿಜೆಪಿ ಸರ್ಕಾರದ ವಿರುದ್ಧ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಹಾಗೇ ಸಿದ್ದರಾಮಯ್ಯ ಸಲಹೆ ಪಡೆಯುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಯಡಿಯೂರಪ್ಪಗೆ ಆರ್ ಎಸ್ ಎಸ್ ನವರು ಸಲಹೆ ನೀಡ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಸಿದ್ದರಾಯ್ಯ ಅಪರೇಷನ್ ಕಮಲದ ಜನಕ ಅನ್ನೋ ಈಶ್ವರಪ್ಪ ಹೇಳಿಕೆಗೆ ಅವರು ಕೆ.ಎಸ್.ಈಶ್ವರಪ್ಪನ ಮೆದುಳಿಗೂ ನಾಲಿಗೆಗೂ ಸಂಬಂಧವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.