Select Your Language

Notifications

webdunia
webdunia
webdunia
Saturday, 26 April 2025
webdunia

ಬಿಜೆಪಿ ಇಬ್ಭಾಗ?: 3 ಡಿಸಿಎಂಗಳ ಬಗ್ಗೆ ಶುರುವಾಯ್ತು ಅಪಸ್ವರ

ಬಿಜೆಪಿ ಸರಕಾರ
ಮೈಸೂರು , ಮಂಗಳವಾರ, 27 ಆಗಸ್ಟ್ 2019 (15:20 IST)
ಅಳೆದೂ ತೂಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ವಾರದ ಬಳಿಕ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿದೆ ಬಿಜೆಪಿ. ಈ ನಡುವೆ 3 ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿರೋದಕ್ಕೆ ಬಿಜೆಪಿ ಮುಖಂಡರೇ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.

ರಾಜ್ಯದ ರಾಜಕೀಯ ಹಾಗೂ ಇಂದಿನ ಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ಸರಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಅಗತ್ಯವೇ ಇರಲಿಲ್ಲ. ಹೀಗಂತ ಬಿಜೆಪಿ ಸಂಸದ ದೂರಿದ್ದಾರೆ.

webdunia
ಬಿಜೆಪಿ ಸರಕಾರ ಅಧಿಕಾರಕ್ಕೆ ಬರೋದಿಕ್ಕೆ ಅತೃಪ್ತ ಶಾಸಕರು ಕಾರಣರಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಮೊದಲು ಚಿಂತನೆ ಮಾಡಬೇಕಿದೆ. ಆದರೆ ಅದನ್ನು ಬಿಟ್ಟು, ಖಾತೆ ಹಂಚಿಕೆ, ಅಪಸ್ವರ, ಡಿಸಿಎಂ ಹುದ್ದೆ ಸೃಷ್ಟಿ ಮಾಡಿಕೊಂಡಿರೋದು ಸರಿಯಲ್ಲ.

ಬಿಜೆಪಿ ಹೈಕಮಾಂಡ್ ಡಿಸಿಎಂ ಹುದ್ದೆ ರಚನೆ ಮಾಡೋಕೆ ಮುಂದಾಗಿದ್ರೆ ಅವರಿಗೆ ರಾಜ್ಯದ ಮುಖಂಡರು ಕಚ್ಚಾಟ ಬಿಟ್ಟು ಮನವರಿಕೆ ಮಾಡಕೊಡಬಹುದಿತ್ತು ಅಂತ ವಾಗ್ದಾಳಿಯನ್ನು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಡೆಸಿದ್ದಾರೆ.   



Share this Story:

Follow Webdunia kannada

ಮುಂದಿನ ಸುದ್ದಿ

ಹಾಡಿನಿಂದ ವೈರಲ್ ಆದ ರಾನುಗೆ ಆಫರ್ ಗಳ ಸುರಿಮಳೆ