Publish Date: Sun, 25 Aug 2019 (17:01 IST)
Updated Date: Sun, 25 Aug 2019 (17:03 IST)
ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿರೋ ಅತೃಪ್ತ ಶಾಸಕರು ಈಗ ಬಿಜೆಪಿಗೆ ಧಮ್ಕಿ ಹಾಕುತ್ತಿದ್ದಾರೆ.
ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ಅವರು, ಆಪರೇಷನ್ ಕಮಲ ಮಾಡೋ ಮೂಲಕ ಬಿಜೆಪಿ ಅಧಿಕಾರಕ್ಕೆ ಏರಿದೆ. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ಸರಕಾರವೇ ಇಲ್ಲ ಅಂತ ಟೀಕೆ ಮಾಡಿದ್ರು.
ರಾಜ್ಯದಲ್ಲಿ ಹಲವೆಡೆ ಬರ ಇದೆ. ಕೆಲವು ಜಿಲ್ಲೆಗಳು ಪ್ರವಾಹದಿಂದ ನಲುಗಿವೆ. ಆದರೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ. ಕೇಂದ್ರದಿಂದ ಯಡಿಯೂರಪ್ಪಗೆ ಹಣ ತರೋಕೆ ಆಗಿಲ್ಲ ಅಂತ ಛೇಡಿಸಿದರು.
ನೂತನ ಸಚಿವರಿಗೆ ಸಚಿವಸ್ಥಾನ ಹಂಚಿಕೆ ಮಾಡೋಕೆ ಬಿಜೆಪಿ ಮೀನಮೇಷ ಎಣಿಸುತ್ತಿದೆ. ಅತೃಪ್ತರನ್ನು ಕಟ್ಟಿಕೊಂಡು ಸರಕಾರ ಮಾಡಿರೋ ಇವರು ಬಹಳ ದಿನ ಅಧಿಕಾರದಲ್ಲಿ ಇರೋದಿಲ್ಲ ಅಂತಂದ್ರು.