Publish Date: Wed, 28 Aug 2019 (11:18 IST)
Updated Date: Wed, 28 Aug 2019 (11:22 IST)
ಬೆಂಗಳೂರು : ಬಿಜೆಪಿ ಪಾಳಯದಲ್ಲಿ ಲಕ್ಷ್ಮಣ್ ಸವದಿಗೆ ಡಿಸಿಎಂ ಪಟ್ಟ ಕೊಟ್ಟಿದ್ದಕ್ಕೆ ಶಾಸಕರು ಸಿಡಿಮಿಡಿಗೊಂಡಿದ್ದು, ಇನ್ನೂ ಸವದಿ ಮತ್ಸರ ಶಮನವಾಗಿಲ್ಲ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಬಹುತೇಕ ಶಾಸಕರಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಅಸಮಾಧಾನಿತ ಶಾಸಕರಿಗೆ ಬಾಲಚಂದ್ರ ಹಾಗೂ ಉಮೇಶ್ ಕತ್ತಿ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. 7 ಶಾಸಕರು ಸೇರಿದಂತೆ ಜಿಲ್ಲೆಯ ಪ್ರಭಾವಿ ನಾಯಕರು ಸಾಥ್ ನೀಡಿದ್ದು, ಪಕ್ಷದ ಮಟ್ಟದಲ್ಲಿ ಯಾವ ರೀತಿ ವಿರೋಧ ಮಾಡಬೇಕೆಂದು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೇ ಸವದಿ ವಿಚಾರವಾಗಿ ಮತದಾರರಿಗೆ ಹೇಗೆ ಉತ್ತರಿಸಬೇಕೆಂದು ಗೊಂದಲದಲ್ಲಿರುವ ಶಾಸಕರು, ಗೆದ್ದವರಿಗೆ ಸ್ಥಾನಮಾನವಿಲ್ಲ, ಸೋತವರಿಗೆ ಸ್ಥಾನ ನೀಡಿದ್ದಕ್ಕೆ ಸಿಡಿಮಿಡಿಗೊಂಡು ಬಾಲಚಂದ್ರ ಹಾಗೂ ಉಮೇಶ್ ಕತ್ತಿ ಪರ ಬ್ಯಾಟಿಂಗ್ ಬೀಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.