Select Your Language

Notifications

webdunia
webdunia
webdunia
webdunia

ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ

ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ
ಬೆಳಗಾವಿ , ಬುಧವಾರ, 14 ಆಗಸ್ಟ್ 2019 (12:22 IST)
ಬೆಳಗಾವಿ : ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ನಡೆದಿದೆ.



ಪ್ರವಾಹದಿಂದ ಮನೆಮಠ ಕಳೆದುಕೊಂಡು ದುಃಖದಲ್ಲಿರುವ ನೂರಾರು ನಿರಾಶ್ರಿತರು ಈ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಅಗಸ್ಟ್ 15 ರಂದು ಧ್ವಜಾರೋಹಣ ಮಾಡಬೇಕಿದೆ ಇಂದು ಶಾಲೆ ಬಿಡುವಂತೆ ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪೊಲೀಸರ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

 

ಅಧಿಕಾರಿಗಳ ಈ ವರ್ತನೆಯಿಂದ ನೊಂದ ನಿರಾಶ್ರಿತರು ಎಲ್ಲಿಗೆ ಹೋಗಬೇಕು ಎಂದು ಕಂಗಲಾಗಿ ದಿಕ್ಕೆ ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ. ಅಲ್ಲದೇ ಜಾಗ ಖಾಲಿ ಮಾಡಿಸುತ್ತಿರುವ ಪಿಡಿಒ ಮತ್ತು ಪೊಲೀಸರ ವಿರುದ್ಧ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ ಸಿಎಂ ಯಡಿಯೂರಪ್ಪನವರ ಈ ಹೇಳಿಕೆ