ಅಖಿಲ ಭಾರತ ರಾಜ್ಯ ವಿದ್ಯಾರ್ಥಿಗಳ ಸಂಘದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಗ್ತಿದೆ.
545 PSI CIVIL, PC ಪರೀಕ್ಷೆಗಳನ್ನು 30 ದಿನದೊಳಗೆ ನಡೆಸಬೇಕು.ಖಾಲಿಇರುವ KPSC ಗೆಜೆಟೆಡ್ ಹುದ್ದೆಗಳು ಹಾಗೂ ಇನ್ನಿತರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು ಎಂದುವಸರ್ಕಾರದ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರಿಯಾದ ರೀತಿಯಲ್ಲಿ ಸರ್ಕಾರ ಪರೀಕ್ಷೆ ನಡೆಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಆಕ್ರೋಶ ಹೊರಹಾಕ್ತಿದ್ದಾರೆ.ಖಾಲಿ ಇರುವ ಹುದ್ದೆಗಳನ್ನು ಶೇಘ್ರದಲ್ಲೇ ಭರ್ತಿ ಮಾಡಿ ಎಂದು ವಿದ್ಯಾರ್ಥಿಗಳಿಂದ ಆಗ್ರಹಿಸುತ್ತಿದ್ದಾರೆ.ಅಲ್ಲದೇ ಶೂ ಪಾಲಿಶ್ ಮಾಡುವ ಮೂಲಕ ಕಡಲೆ ಕಾಯಿ ಮಾರುವ ಮೂಲಕ ವಿನೂತನವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಸರ್ಕಾರಿ ಕೆಲಸ ಬೇಕು ಅಂದ್ರೆ ಲಕ್ಷ ಲಕ್ಷ ಹಣ ಕೇಳ್ತಾರೆ.ಅಷ್ಟು ಹಣ ನಮ್ಮ ಬಳಿ ಇದ್ದರೆ ಬಿಸಿನೆಸ್ ಮಾಡ್ತಿದ್ವಿ ,ಕೊರೋನ ಸಮಯದಲ್ಲಿ ನಮಗೆ ನೋಟಿಫಿಕೇಶನ್ ಬಿಟ್ಟಿದ್ದು,ಇನ್ನು ಎಕ್ಸಾಮ್ ಆಗಿಲ್ಲ.ಸರ್ಕಾರದಲ್ಲಿ ಕೆಲಸ ಖಾಲಿ ಇದ್ರು ಭರ್ತಿ ಮಾಡ್ತಿಲ್ಲ.ವಿದ್ಯಾರ್ಥಿಗಳು ಬೀದಿಗೆ ಬರ್ತಿದದ್ದಾರೆ ಸರ್ಕಾರಕ್ಕೆ ರಾಜಕಾರಣ ಮಾತ್ರ ಬೇಕು ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕ್ತಿದ್ದಾರೆ.