Publish Date: Thu, 16 Feb 2023 (13:45 IST)
Updated Date: Thu, 16 Feb 2023 (13:49 IST)
ಆ್ಯಂಬುಲೆನ್ಸ್, ಟೆಂಪೋ ನಡುವೆ ಮುಖಾಮಖಿ ಡಿಕ್ಕಿಯಾಗಿದ್ದು, ಟೆಂಪೋದಲ್ಲಿದ್ದ 8ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಬಳಿ ಘಟನೆ ನಡೆದಿದೆ. ಯಲ್ಲಮ್ಮ ಗುಡ್ಡದಿಂದ ರಾಣೆಬೆನ್ನೂರಿಗೆ ಹೊರಟಿದ್ದ ಟೆಂಪೋ ಹಾಗೂ ಗದಗ್ನಿಂದ ಕಿಮ್ಸ್ಗೆ ಬರುತ್ತಿದ್ದ ಆ್ಯಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.