Select Your Language

Notifications

webdunia
webdunia
webdunia
webdunia

ಆ್ಯಂಬುಲೆನ್ಸ್ ಸೇವೆಯಲ್ಲಿ ಶೀಘ್ರದಲ್ಲೇ ಕರ್ನಾಟಕ ನಂಬರ್ -1

ಆ್ಯಂಬುಲೆನ್ಸ್ ಸೇವೆಯಲ್ಲಿ ಶೀಘ್ರದಲ್ಲೇ  ಕರ್ನಾಟಕ ನಂಬರ್ -1
ಬೆಂಗಳೂರು , ಗುರುವಾರ, 24 ಮಾರ್ಚ್ 2022 (18:11 IST)
ತುರ್ತು ಆಯಂಬುಲೆನ್ಸ್ ಸೇವೆಗೆ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ಇದು ದೇಶಕ್ಕೆ ಮಾದರಿಯಾಗಲಿದೆ ಎಂದು ಸಚಿವ ಕೆ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು.
ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಮಾನದಂಡಗಳ ಅನ್ವಯ 108 ಆಯಂಬುಲೆನ್ಸ್ ಸೇವೆಯನ್ನು ಉತ್ಕøಷ್ಣಗೊಳಿಸಲಾಗುವುದು ಎಂದರು.
 
2007-08ನೇ ಸಾಲಿನಲ್ಲಿ ಆಯಂಬುಲೆನ್ಸ್ ಸೇವೆಯನ್ನು ಜಿವಿಕೆ ಸಂಸ್ಥೆಗೆ 10 ವರ್ಷಗಳ ಅವಗೆ ನೀಡಲಾಗಿತ್ತು. ಆರಂಭದಲ್ಲಿ ಅವರ ಸೇವೆ ಒಳ್ಳೆಯದಿತ್ತು. ಅನಂತರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. 2017ರಲ್ಲಿ ಆಗಿನ ಸರ್ಕಾರ ಜಿವಿಕೆಯೊಂದಿಗಿನ ಒಪ್ಪಂದ ರದ್ದು ಮಾಡಿಸಿತ್ತು.
 
ಆ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಇಲ್ಲಿಯವರೆಗೂ ಮುಂದುವರೆಸಲಾಗಿತ್ತು. ಆಯಂಬುಲೆನ್ಸ್ ಸೇವೆಯಲ್ಲಿ ವಿಳಂಬವಾಗಿರುವುದು ನಿಜ. ಆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 71 ಆರೋಗ್ಯ ಕವಚ 108 ಆಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ.
 
ಮುಂದಿನ ಸೇವಾದಾರರು ಆಯ್ಕೆಯಾಗುವವರೆಗೂ ಆಯಂಬುಲೆನ್ಸ್ನ ಮೇಲ್ವಿಚಾರಣೆಯನ್ನು ಜಿಪಿಎಸ್ ಟ್ರಾಕಿಂಗ್ ದತ್ತಾಂಶಗಳ ಪರಿಶೀಲನೆ ಹಾಗೂ ಕ್ಷೇತ್ರ ಭೇಟಿ ಮೂಲಕ ಮಾಡಲಾಗುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿ.ಇ.ಟಿ. ವೇಳಾಪಟ್ಟಿ ನಾಳೆ ಬಿಡುಗಡೆ