ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದಲ್ಲಿ ಶಿವರಾತ್ರಿ ಸಂಭ್ರಮ ಗರಿಗೆದರಿದೆ. ಮಠದಲ್ಲಿ ಶಿವರಾತ್ರಿಗೆ 30 ಸಾವಿರ ತಂಬಿಟ್ಟು ಸಿದ್ಧವಾಗಿದೆ. 30 ಕ್ವಿಂಟಲ್ ಮಂಡ್ಯ ಬೆಲ್ಲದ ಪುಡಿ,10 ಕ್ವಿಂಟಾಲ್ ಗೋಧಿ,10 ಕ್ವಿಂಟಾಲ್ ಅಕ್ಕಿ, 10 ಕ್ವಿಂಟಾಲ್ ಉರಗಡ್ಲೆ, 5 kg ಏಲಕ್ಕಿ, 4 ಕ್ವಿಂಟಾಲ್ ಕಡ್ಲೆ ಬೀಜ, 1 ಕ್ವಿಂಟಾಲ್ ಹೆಸರುಕಾಳು, 1 ಕ್ವಿಂಟಾಲ್ ಕೊಬ್ಬರಿ ಬಳಸಿ 30 ಸಾವಿರ ತಂಬಿಟ್ಟು ಸಿದ್ಧವಾಗಿದೆ. ಜಾತ್ರೆಗೆ ಬರುವ ಮಠದ ಮಕ್ಕಳು ಮತ್ತು ಭಕ್ತರಿಗಾಗಿ ತಂಬಿಟ್ಟು ಸಿದ್ಧವಾಗಿದೆ.