ಬೆಂಗಳೂರು: ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಗ್ಗೆ ಕಾಮೆಂಟ್ ಮಾಡಿರುವ ಪ್ರಧಾನಿ ಮೋದಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಮೋದಿಗೆ ನಾಗಮಂಗಲ ಗಲಭೆ ಮಾತ್ರ ಕಾಣುತ್ತಾ, ಮುನಿರತ್ನ ಕಾಣಲ್ವಾ ಎಂದಿದ್ದಾರೆ.
ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಗ್ಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ ಗಣೇಶನನ್ನು ಅರೆಸ್ಟ್ ಮಾಡುವ ಪರಿಸ್ಥಿತಿಯಾಗಿದೆ ಎಂದು ಮೋದಿ ವ್ಯಂಗ್ಯ ಮಾಡಿದ್ದರು. ಅವರ ಭಾಷಣಕ್ಕೆ ಈಗ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಮೋದಿ ಈಗ ಕರ್ನಾಟಕದ ಗಣೇಶನ ಮೂರ್ತಿ ಬಗ್ಗೆಯೂ ಮಾತನಾಡಲು ಶುರು ಮಾಡಿದ್ದಾರೆ. ಅವರಿಗೆ ಅರಿವಿಲ್ವಾ? ಇದೇ ಬಿಜೆಪಿ ಶಾಸಕ ಮುನಿರತ್ನ ಬಂಧಿತರಾಗಿದ್ದಾರಲ್ವಾ? ಅದರ ಬಗ್ಗೆ ಕಾಣಲ್ವಾ ಎಂದು ಕಿಡಿ ಕಾರಿದ್ದಾರೆ. ಇನ್ನು ಬಿಜೆಪಿಯವರಿಗೆ ಎಲ್ಲಿ ಕೋಮುಗಲಭೆಯಾಗುತ್ತದೋ ಅಲ್ಲಿ ಬೇಳೆ ಬೇಯಿಸುವುದೇ ಕೆಲಸ ಎಂದಿದ್ದಾರೆ.
ಬಿಜೆಪಿಯವರು ಈಗ ಸತ್ಯಶೋಧನಾ ಸಮಿತಿ ಮಾಡಿ ನಾಗಮಂಗಲಕ್ಕೆ ಹೋಗ್ತಾರಂತೆ. ಇದಕ್ಕೆ ಮೊದಲು ರಾಜ್ಯದಲ್ಲಿ ಬರಗಾಲ ಬಂದಾಗ, ಅತಿವೃಷ್ಟಿ ಬಂದಾಗ ಹೋಗಿದ್ದಾರಾ? ಎಲ್ಲಿ ಕೋಮುಗಲಭೆಯಾಗುತ್ತದೋ ಅಲ್ಲಿ ಹೋಗಿ ಬೇಳೆ ಬೇಯಿಸುವುದೇ ಕೆಲಸ. ನಾಗಮಂಗಲದಲ್ಲಿ ಘಟನೆಯಾಗಿದೆ. ಇದರ ಬಗ್ಗೆ ತನಿಖೆ ಮಾಡ್ತಿದ್ದೀವಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.