Publish Date: Fri, 13 Sep 2024 (12:18 IST)
Updated Date: Fri, 13 Sep 2024 (12:21 IST)
ಹುಬ್ಬಳ್ಳಿ: ಮಂಡ್ಯದ ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಗ್ಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು ಮುಸ್ಲಿಮರು ಮೈಕ್ ನಿಲ್ಲಿಸಿದರೆ ನಾವು ಡಿಜೆ ನಿಲ್ಲಿಸುತ್ತೇವೆ ಎಂದಿದ್ದಾರೆ.
ನಾಗಮಂಗಲದಲ್ಲಿ ಮೊನ್ನೆ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಹಾಕಿಕೊಂಡು ಮೆರವಣಿಗೆ ಸಾಗುತ್ತಿದ್ದ ಹಿಂದೂಗಳ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಭಾರೀ ಕೋಮುಗಲಭೆಗೆ ಕಾರಣವಾಗಿತ್ತು. ಘಟನೆಯಲ್ಲಿ ಹಲವರ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು.
ಇದೀಗ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್, ಮಸೀದಿ ಎಂದರೆ ಗಲಾಟೆ ಮಾಡುವ ಕೇಂದ್ರವೇ? ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋಗಬಾರದೇ? ಇದು ಪೂರ್ವಯೋಜಿತ ಗಲಭೆ ಎಂದಿದ್ದಾರೆ. ಇನ್ನು ಇಂದು ನಾಗಮಂಗಲಕ್ಕೆ ಭೇಟಿ ನೀಡುವುದಾಗಿ ಹೇಳಿರುವ ಪ್ರಮೋದ್ ಮುತಾಲಿಕ್ ಯಾರು ತಡೆಯುತ್ತಾರೋ ತಡೆಯಲಿ ಎಂದಿದ್ದಾರೆ.
ಮೊದಲು ಮುಸ್ಲಿಮರ ಜೊತೆ ಎಲ್ಲಾ ವ್ಯವಹಾರ ನಿಲ್ಲಿಸಬೇಕು. ಮುಸ್ಲಿಮರು ಮೊದಲು ಮೈಕ್ ನಿಲ್ಲಿಸಲು ನಾವೂ ಡಿಜೆ ಹಾಕುವುದನ್ನು ನಿಲ್ಲಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಗಲಭೆಗಳಿಗೆ ನಾವು ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ.