ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಪಟ್ಟಂತೆ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ಕೊಟ್ಟಿದ್ದಾರೆ. ಗಲಭೆಗೆ ಕಾರಣವೇನೆಂದು ಹೇಳಿದ್ದಾರೆ.
ನಿನ್ನೆ ಮಸೀದಿ ಮಾರ್ಗವಾಗಿ ಮೆರವಣಿಗೆ ಹೋಗಬೇಕಿತ್ತು. ಆದರೆ ಆಗ ನಮಾಜ್ ಸಮಯವಾಗಿದ್ದರಿಂದ ಒಂದು ಹತ್ತು ನಿಮಿಷ ಬ್ರೇಕ್ ಕೊಡಿ ಎಂದು ಕೇಳಿದ್ದಾರೆ. ಆದರೆ ಆಗ ಅವರು ಒಪ್ಪದೇ ಇದ್ದಾಗ ಗಲಾಟೆಯಾಗಿದೆ. ನಾನು ಘಟನೆ ಬಗ್ಗೆ ಮಾತನಾಡಿ ಕಾರಣ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.
ಈ ವಿಚಾರ ದೊಡ್ಡದಾಗುತ್ತಿರುವುದೇ ರಾಜಕೀಯ ನಾಯಕರ ಹೇಳಿಕೆಗಳಿಂದ. ಜಾತ್ಯಾತೀವಾದಿ ಯಾವುದೇ ನಾಯಕರೂ ಗಲಾಟೆ ಆಗಬಾರದು ಎಂದೇ ಬಯಸುತ್ತಾರೆ. ನಾನೂ ಅದನ್ನೇ ಬಯಸುತ್ತೇನೆ. ಗಲಾಟೆ ಆಗಲಿ ಎಂದು ನಾನು ಹೇಳಲ್ಲ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಥರ ಗಲಾಟೆ ಆಗಬಾರದು ಎಂದು ನಾವೆಲ್ಲಾ ಪ್ರಯತ್ನ ಮಾಡಬೇಕು. ಇಂತಹ ಹೇಳಿಕೆ ನೀಡಿದರೆ ಗಲಾಟೆ ಆಗದೇ ಇರುತ್ತಾ? ಗಲಾಟೆ ಆಗೋದೇ ಇಂತಹ ಹೇಳಿಕೆಗಳಿಂದ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಇಂತಹ ಗಲಾಟೆಯಾಗ್ತಿದೆ ಎನ್ನುವುದು ತಪ್ಪು. ಯಾಕೆ ಬಿಜೆಪಿಯವರು ಇದ್ದಾಗ ಗಲಾಟೆಗಳೇ ಆಗಲ್ವಾ ಎಂದು ಕಿಡಿ ಕಾರಿದ್ದಾರೆ.