Select Your Language

Notifications

webdunia
webdunia
webdunia
webdunia

ನಾಗಮಂಗಲ ಕೋಮುಗಲಭೆ: ಎಫ್ಐಆರ್ ನೋಡಿ ಕೆಂಡಾಮಂಡಲರಾದ ಎಚ್ ಡಿ ಕುಮಾರಸ್ವಾಮಿ

HD Kumaraswamy

Krishnaveni K

ಮಂಡ್ಯ , ಶುಕ್ರವಾರ, 13 ಸೆಪ್ಟಂಬರ್ 2024 (10:36 IST)
ಮಂಡ್ಯ: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕೋಮುಗಲಭೆಯಾದ ಸ್ಥಳಕ್ಕೆ ಭೇಟಿಯಾದ ಕೇಂದ್ರ ಸಚಿವ ಮತ್ತು ಸ್ಥಳೀಯ ಸಂಸದ ಎಚ್ ಡಿ ಕುಮಾರಸ್ವಾಮಿ ಎಫ್ಐಆರ್ ನಲ್ಲಿ ದಾಖಲಾದ ಹೆಸರುಗಳನ್ನು ನೋಡಿ ಕೆಂಡಾಮಂಡಲರಾದರು.

ಕೋಮುಗಲಭೆಯಾದ ಸ್ಥಳಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ ಎಚ್ ಡಿ ಕುಮಾರಸ್ವಾಮಿ, ಪೊಲೀಸರು ದಾಖಲಿಸಿ ಎಫ್ಐಆರ್ ಲಿಸ್ಟ್ ನೋಡಿ ಸಿಟ್ಟಾದರು. ಈ ಲಿಸ್ಟ್ ನಲ್ಲಿ ನಿಜವಾಗಿ ಗಲಾಟೆಗೆ ಕಾರಣರಾದವರ ಹೆಸರಿಲ್ಲ. ಘಟನೆಯಲ್ಲಿ ಪೊಲೀಸರ ತಪ್ಪೂ ಇದೆ. ಎಷ್ಟು ಪೊಲೀಸರ ಹೆಸರು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಫ್ ಐಅರ್ ಲಿಸ್ಟ್ ನೋಡಿದರೆ ನ್ಯಾಯಾಲಯ ಏನು ಹೇಳುತ್ತದೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ನಿಜವಾಗಿ ಗಲಾಟೆಗೆ ಯಾರು ಕಾರಣರಾಗುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಸಿಕ್ಕ ಸಿಕ್ಕವರ ಮೇಲೆ ಪ್ರಕರಣ ದಾಖಲಿಸಬೇಡಿ. ಇದರಿಂದ ಅವರ ಕುಟುಂಬಗಳಿಗೂ ತೊಂದರೆಯಾಗುತ್ತಿದೆ ಎಂದರು.

ಇನ್ನು, ಈ ಪ್ರಕರಣವನ್ನು ಇಷ್ಟಕ್ಕೇ ನಿಲ್ಲಿಸಲ್ಲ. ನಾನು ಯಾವತ್ತೂ ಒಂದು ಸಮುದಾಯವನ್ನು ಓಲೈಸಲಿಲ್ಲ. ಎಲ್ಲಾ ಸಮುದಾಯದವರನ್ನೂ ಸಮಾನವಾಗಿ ನೋಡುತ್ತಾ ಬಂದಿದ್ದೆ.  ನಿಮ್ಮ ರಾಜಕೀಯ ಉದ್ದೇಶಕ್ಕಾಗಿ ಎರಡು ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು, ಗೃಹಸಚಿವರು ಮಾಧ್ಯಮಗಳಿಗೆ ಇದೊಂದು ಆಕಸ್ಮಿಕ ಘಟನೆ ಎಂದಿದ್ದಾರೆ. ನಾನು ಪರಮೇಶ್ವರ್ ಗೆ ಈ ಮೂಲಕ ಕೇಳಲು ಬಯಸುತ್ತೇನೆ. ಈ ರೀತಿಯ ಹೇಳಿಕೆಗಳ ಮೂಲಕ ಜನತೆಗೆ ಸಂದೇಶ ಕೊಡಲು ಬಯಸುತ್ತೀರಿ? ಗೃಹಸಚಿವರಿಗೆ ಏನು ಇನ್ನು ಇಲ್ಲಿ ಹೆಣ ಬೀಳಬೇಕಿತ್ತಾ? ಇನ್ನೂ ಯಾಕೆ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀಫ್ ಜಸ್ಟಿಸ್ ಜೊತೆ ಮನಮೋಹನ್ ಸಿಂಗ್ ಇಫ್ತಾರ್ ಕೂಟ ಮಾಡಬಹುದು, ಮೋದಿ ಗಣೇಶ ಹಬ್ಬ ಮಾಡಬಾರದಾ